ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಂಸದ ಗೋವಿಂದ ಕಾರಜೋಳರವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಪಕ್ಷದ ಟಿಕೆಟ್ ಹೇಗೆ ಸಿಕ್ಕಿದ್ದು ಎಂಬ ಮಾಹಿತಿಯನ್ನು ಮಾದಾರ ಚನ್ನಯ್ಯ ಶ್ರೀಗಳು ಹೂರ ಹಾಕಿದ ಪ್ರಸಂಗ ನಡೆಯಿತು.
ಲೋಕಸಭಾ ಚುನಾವಣೆಯಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿಗಳು ಸ್ಪರ್ಧಿಸುತ್ತಾರೆಂದು ಪ್ರಚಾರವಾಗಿದ್ದಕ್ಕೆ ಕಾರಣ ಮಾಜಿ ಶಾಸಕ ಬಸವರಾಜನ್, ಇದರ ಬಗ್ಗೆ ನಾನು ಗಮನ ನೀಡಿಲಿರಲ್ಲಿ ಇದರ ಬಗ್ಗೆ ಅವರು ನನಗೆ ಈ ಬಾರಿಯ ಚುನಾವಣೆಯಲ್ಲಿ ನಿಮ್ಮ ಹೆಸರು ಕೇಳಿ ಬಂದರೆ ಒಪ್ಪಿಕೊಳ್ಳುವಂತೆ ಸೂಚಿಸಿದ್ದರು.
ಇದರ ಬಗ್ಗೆ ನನ್ನ ಹೆಸರು ದೆಹಲಿ ಮಟ್ಟದವರೆಗೂ ಹೋಗಿತ್ತು. ಇದರ ಬಗ್ಗೆ ನನಗೆ ಅರಿವು ಇರಲಿಲ್ಲ. ಇದರ ಬಗ್ಗೆ ದೆಹಲಿಯಲ್ಲಿ ಒಬ್ಬರನ್ನು ವಿಚಾರ ಮಾಡಿದಾಗ ಅವರು ನೀವು ಸುಮ್ಮನೆ ಇರಿ ಅವಕಾಶ ಸಿಕ್ಕದೆ ಸ್ಫರ್ಧೆ ಮಾಡಿ ಎಂದರು.
ಸಂಸದ ಕಾರಜೋಳರವರ ಋಣ ನಮ್ಮ ಮಠದ ಮೇಲಿತ್ತು ಈಗಾಗಲೇ ನಮ್ಮ ಮಠದಿಂದ ಹಲವಾರು ಮಂದಿ ಶಾಸಕರು, ಸಂಸದರು, ಮಂತ್ರಿಗಳಾಗಿದ್ದಾರೆ. ಆಗಿನ ಸಮಯದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಕಾರಜೋಳರವರ ಹೆಸರು ಕೇಳಿ ಬಂತು.
ಇವರ ಬಗ್ಗೆ ತೀರ್ಮಾನವಾಗಿದ್ದು ಆದಿಚುಂಚನಗಿರಿ ಮಠದಲ್ಲಿ ಶ್ರೀಗಳು ನಾನು ಹಾಗೂ ಕಾರಜೋಳ ರವರು ಕುಳಿತು ಮಾತನಾಡಿ ಈ ಬಾರಿ ಕಾರಜೋಳರವರಿಗೆ ಆಶೀರ್ವಾದವನ್ನು ಮಾಡಿದರು. ಇದರಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಗೋವಿಂದ ಕಾರಜೋಳ ಬರಲಿಕ್ಕೆ ಅವಕಾಶವಾಯಿತು.
ಇಲ್ಲವಾಗಿದ್ದರೆ ಚುನಾವಣೆಯಲ್ಲಿ ನಮ್ಮ ಹೆಸರು ಬರುತ್ತಿತ್ತು. ಈಗ ನಮಗೆ ಯಾವುದೇ ಆತಂಕ ಇಲ್ಲ. ಬೇರೆಯವರಿಗೆ ಬೆಳೆಯಲು ಅವಕಾಶ ನೀಡಲಾಗುವುದು ಎಂದರು.
ನಾವು ಆಧ್ಯಾತ್ಮಿಕವಾಗಿ ಬರಬೇಕೆಂದು ಇರಲಿಲ್ಲ, ನಾವು ಒಂದು ಮಠದ ಪೀಠಾಧ್ಯಕ್ಷರಾಗಲು ಮಾಜಿ ಶಾಸಕ ಬಸವರಾಜನ್ ಕಾರಣರಾಗಿದ್ದಾರೆ. ನಮ್ಮನ್ನು ಮಾದಾರ ಮಠಕ್ಕೆ ಸ್ವಾಮಿಗಳನ್ನಾಗಿ ಮಾಡಲು ಸುಮಾರು ಮೂರು ತಿಂಗಳ ಕಾಲ ನಮ್ಮನ್ನ ಕಾದಿದ್ದಾರೆ. ಚಿತ್ರದುರ್ಗದ ಬೃಹನ್ಮಠದಲ್ಲಿ ನಮ್ಮನ್ನು ಇರಿಸಿ ಎಲ್ಲೂ ಹೋಗದಂತೆ ಕಾವಲು ಹಾಕಿ ಕಾದು ಮಾದಾರ ಗುರುಪೀಠಕ್ಕೆ ಸ್ವಾಮಿಗಳನ್ನಾಗಿ ಮಾಡಿದ್ದಾರೆ.
೧೯೯೦ ದಶಕದಲ್ಲಿ ಮುರುಘಾಮಠದಲ್ಲಿ ಈ ಹಿಂದೆ ದಲಿತರಿಗೆ ಮಹಿಳೆಯರಿಗೆ ಪ್ರವೇಶ ಇರಲಿಲ್ಲ. ಅಲ್ಲಿಗೆ ಬಸವರಾಜನ್ ಆಡಳಿತಾಧಿಕಾರಿಗಳಾಗಿ ಬಂದ ಮೇಲೆ ದಲಿತರಿಗೆ ಮಠದ ಒಳಗಡೆ ಪ್ರವೇಶ ನೀಡಿದ್ದಲ್ಲದೆ ಮಹಿಳೆಯರಿಗೆ ಗರ್ಭ ಗುಡಿಗೆ ಹೋಗಿ ಪೂಜೆ ಮಾಡುವ ಅವಕಾಶ ಕಲ್ಪಿಸಿದರು.
ಕಾವಾಡಿಗರ ಹಟ್ಟಿಯಲ್ಲಿ ಗಂಗಾಧೇಶ್ವರ ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶ ನೀಡಿದವರು ಬಸವರಾಜನ್ ರವರು ಎಂದು ಸ್ವಾಮೀಜಿಗಳು ತಿಳಿಸಿದರು.
ಈ ಸಮಯದಲ್ಲಿ ಜನರಿಂದ ಬಂದ ಆರೋಪಗಳನ್ನು ಮೈಮೇಲೆ ಹಾಕಿಕೊಂಡು ದಲಿತರಿಗೆ ಮತ್ತು ಮಹಿಳೆಯರಿಗೆ ಅವಕಾಶ ನೀಡಿದರು. ಮರುಘಾಮಠ ಶೋಷಿತ ಸಮುದಾಯಗಳನ್ನು ಅಪ್ಪಿಕೊಂಡು ಅವರಿಗೆ ಒಂದು ಉತ್ತಮವಾದ ವಾತಾವರಣವನ್ನು ನಿರ್ಮಾಣ ಮಾಡುವುದರ ಮೂಲಕ ಮುರುಘಾಮಠ ನಮ್ಮೆಲ್ಲ ಶೋಷಿತ ಸಮುದಾಯಗಳಿಗೆ ತವರು ಮನೆಯಾಗಿದೆ ಎಂದರು.