ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ದೊಡ್ಡಮಳೂರು ಬಳಿ ಇಂದು ಹಮ್ಮಿಕೊಂಡಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರು ಹಾಗೂ ಶಾಸಕರು ಪಾಲ್ಗೊಂಡು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ ಪರಮತಯಾಚಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಮಾತನಾಡಿ, “ಯೋಗೇಶ್ವರ್ ಅವರು ಎರಡು ಬಾರಿ ಸೋತಿದ್ದಾಗಿ ತಮ್ಮ ದುಗುಡ ಹೇಳಿಕೊಂಡಿದ್ದಾರೆ. ಆದ್ರೆ ಅದಕ್ಕೆ ಕಾರಣ ಖಂಡಿತ ಚನ್ನಪಟ್ಟಣದ ಜನತೆ ಅಲ್ಲ.
ಅವರ ಸೋಲಿಗೆ ಅವರೇಕಾರಣ. ವಿಧಾನಸಭೆ ಹಾಗೂ ಸಂಸತ್ ಚುನಾವಣೆ ಸಮಯದಲ್ಲೇ ಕಾಂಗ್ರೆಸ್ ಸೇರಿಕೊಳ್ಳುವಂತೆ ಅವರಿಗೆ ತಿಳಿವಳಿಕೆ ಹೇಳಿದ್ರೂ ಬರ್ಲಿಲ್ಲ.
ಅವರು ಏನಾದ್ರೂ ಸ್ಪರ್ಧಿಸಿದ್ರೆ ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗ್ತಿರ್ಲಿಲ್ಲ. ಮೊನ್ನೆ ನಾಗವಾರದ ಬಳಿ ಪ್ರಚಾರ ಮಾಡುವಾಗ ಯಾರೋ ಒಬ್ಬರು ಮಹಿಳೆ “ನೀವು ಕಾಂಗ್ರೆಸ್ ಬಿಟ್ಟು ಹೋಗ್ಬಾರ್ದು” ಅಂತ ಹೇಳಿದ್ರು.
ಯೋಗೇಶ್ವರ್ ಅವರಿಗೆ ಈಗ ವಾಸ್ತವ ಅರ್ಥವಾಗಿದೆ”, ಎಂದು ಡಿಕೆ ಶಿವಕುಮಾರ್ ಟ್ವೀಟ್ ಮಾಡಿ ತಿಳಿಸಿದರು.