ವಿದ್ಯಾರ್ಥಿಗಳಿಗೆ ಮದ್ಯ ಸೇವನೆ ಮಾಡಿ ಎಂದು ಒತ್ತಾಯಿಸಿದ್ದ ಶಿಕ್ಷಕನ ವಜಾ

News Desk

ಚಂದ್ರವಳ್ಳಿ ನ್ಯೂಸ್, ತೂತುಕುಡಿ:
ಖಾಸಗಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಲೈಂಗಿಕ ಕಿರುಕುಳದ ಆಘಾತಕಾರಿ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಉದಂಗುಡಿಯ ಎನ್ನುವಲ್ಲಿ ಬೆಳಕಿಗೆ ಬಂದಿದೆ.

ದೈಹಿಕ ಶಿಕ್ಷಣ ಶಿಕ್ಷಕ ಪೋನ್‌ಸಿಂಗ್ ತಾನು ಕೆಲಸ ಮಾಡುತ್ತಿದ್ದ ಸಲ್ಮಾ ಶಾಲೆಯ ವಿದ್ಯಾರ್ಥಿಗಳನ್ನು ಮದ್ಯಪಾನ ಮಾಡಲು ಒತ್ತಾಯಿಸಿದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.

ವರದಿಗಳ ಪ್ರಕಾರ, ಅಕ್ಟೋಬರ್ 22ರಂದು ತೂತುಕುಡಿಯಲ್ಲಿ ನಡೆದ ವಲಯ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಈ ಘಟನೆ ಸಂಭವಿಸಿದೆ.
ಕ್ರೀಡಾ ಸ್ಪರ್ಧೆಗಳನ್ನು ಮರುದಿನಕ್ಕೆ ಮುಂದೂಡಿದ ನಂತರ ಪೋನ್​ಸಿಂಗ್
, ಶಾಲೆಯ 9 ವಿದ್ಯಾರ್ಥಿಗಳು ಮತ್ತು 6 ವಿದ್ಯಾರ್ಥಿನಿಯರೊಂದಿಗೆ ರಾತ್ರಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು.

ಪೋನ್‌ಸಿಂಗ್ ಅವರು ಕೆಲವು ವಿದ್ಯಾರ್ಥಿನಿಯರನ್ನು ಮದ್ಯ ಸೇವಿಸುವಂತೆ ಒತ್ತಾಯಿಸಿದರು ಮತ್ತು ಅಶ್ಲೀಲ, ಅವಹೇಳನಕಾರಿ ಭಾಷೆಯಲ್ಲಿ ಮಾತನಾಡಿದರು ಎಂದು ಆರೋಪಿಸಲಾಗಿದೆ.

ಕುಡಿಯದಿದ್ದರೆ ಮುಂದಿನ ಸ್ಪರ್ಧೆಗಳಲ್ಲಿ ಭಾಗವಹಿಸದಂತೆ ತಡೆಯುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಈ ಘಟನೆಯ ಕುರಿತು ವಿದ್ಯಾರ್ಥಿಗಳು ಪೋಷಕರಿಗೆ ತಿಳಿಸಿದರೂ ಶಾಲೆಯ ಆಡಳಿತ ಮಂಡಳಿ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಆದರೆ, ಈ ವಿಷಯ ಬೆಳಕಿಗೆ ಬಂದಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಶಾಲೆಯ ಮುಂದೆ ಜಮಾಯಿಸಿದ ಪೋಷಕರು ಹಾಗೂ ಸಂಬಂಧಿಕರು ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸಲಾಗಿದ್ದು, ಶಾಲಾ ಆಡಳಿತ ಮಂಡಳಿ ಫೋನ್​ಸಿಂಗ್ ಅವರನ್ನು ವಜಾಗೊಳಿಸಿರುವುದು ಬೆಳಕಿಗೆ ಬಂದಿದೆ.

ದೂರಿನ ಮೇರೆಗೆ ತಿರುಚೆಂದೂರು ಎಲ್ಲಾ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಯಮತ್ತೂರಿನಲ್ಲಿ ತಲೆಮರೆಸಿಕೊಂಡಿದ್ದ ಪೋನ್‌ಸಿಂಗ್‌ನನ್ನು ಕಳೆದ ರಾತ್ರಿ ಬಂಧಿಸಿದ್ದಾರೆ. ಆತನನ್ನು ತಿರುಚೆಂದೂರಿಗೆ ಕರೆತರಲಾಗಿದ್ದು, ಸದ್ಯ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.

 

 

- Advertisement -  - Advertisement - 
Share This Article
error: Content is protected !!
";