ಕುಮಾರಸ್ವಾಮಿಗೆ ಕರಿಯ ಎಂದ ಸಚಿವ ಜಮೀರ್ ಗೆ ಸೊಕ್ಕು-ಸಿಟಿ ರವಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರನ್ನು ಸಚಿವ ಜಮೀರ್ ಅಹ್ಮದ್ ಖಾನ್ ಕರಿಯ ಅಂತ ಕರೆದು ಜನಾಂಗೀಯ ನಿಂದನೆಯ ಅಪರಾಧವೆಸಗಿದ್ದಾರೆ.
ಇದು ಅವರಲ್ಲಿರುವ ಸೊಕ್ಕನ್ನು ತೋರಿಸುತ್ತದೆ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಕಿಡಿ ಕಾರಿದ್ದಾರೆ.

ಹಿಂದೂಗಳು ಆರಾಧಿಸುವ ಬಹುತೇಕ ದೇವರುಗಳು ಕೃಷ್ಣವರ್ಣೀಯರು ಎಂದು ಸಿಟಿ ರವಿ ಸಮರ್ಥಿಸಿಕೊಂಡಿದ್ದಾರೆ.
ರಾಮ
, ಕೃಷ್ಣ ಮತ್ತು ಪರಶಿವ-ಎಲ್ಲರೂ ಕಪ್ಪುಬಣ್ಣದವರು, ಅಧಿಕಾರದ ಅಮಲಿನಲ್ಲಿ ತೇಲುತ್ತಿರುವ ಜಮೀರ್ ಗೆ ಜನ ಬುದ್ಧಿ ಕಲಿಸಬೇಕಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವನ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಹೇಳಿದರು.

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ಅವರು ಇಸ್ಲಾಂಗೆ ಮತಾಂತರಗೊಳ್ಳಬೇಕೆಂದಿದ್ದರು ಎಂದು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಅಜ್ಜಂಪುರ ಖಾದ್ರಿ ಹಸೀ ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂದು ಸಿಟಿ ರವಿ ಕಿಡಿ ಕಾರಿದ್ದಾರೆ.

ಅದರೆ ತನ್ನ ಮೂಲ ಸಂಸ್ಕೃತಿಯನ್ನು ತಾನ್ಯಾವತ್ತೂ ತ್ಯಜಿಸಲ್ಲ ಅಂತ ಅಂಬೇಡ್ಕರ್ ಹೇಳಿದ್ದರು ಮತ್ತು ಥಾಟ್ಸ್ ಆಫ್ ಪಾಕಿಸ್ತಾನ್ ಪುಸ್ತಕದಲ್ಲಿ ಇಸ್ಲಾಂ ಬಗ್ಗೆ ವಿವರಣೆ ನೀಡಿದ್ದಾರೆ ಎಂದು ರವಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

 

 

 

- Advertisement -  - Advertisement - 
Share This Article
error: Content is protected !!
";