1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಕಳ್ಳರ ಬಂಧನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಸಂಪಿಗೆ ಥಿಯೇಟರ್‌ ಮಾಲೀಕ ನಾಗೇಶ್ ಅವರಿಗೆ ಮದ್ಯದಲ್ಲಿ ಮತ್ತು ಬರುವ ಔಷಧಿ ಬೆರೆಸಿಕೊಟ್ಟು ಕುಡಿಸಿ
, ನಂತರ ಖದೀಮರು ಜಯನಗರದ ಮನೆಯಲ್ಲಿದ್ದ 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಪ್ರಕರಣವನ್ನು ಬೆಂಗಳೂರು ಪೊಲೀಸರು ಬೇಧಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

ನೇಪಾಳಿ ಗ್ಯಾಂಗ್‌ಆರೋಪಿಗಳು ನಾಗೇಶ್ ಮನೆಯಲ್ಲಿದ್ದ ಸುಮಾರು 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರು.

 ಇನ್ಸ್ಪೆಕ್ಟರ್ ದೀಪಕ್ ಮತ್ತು ಇತರೆ ಪೊಲೀಸರ ತಂಡವು ಕಳವು ಮಾಡಿದ ಗ್ಯಾಂಗ್ ಆರೋಪಿಗಳನ್ನು ಬಂಧಿಸಿದ್ದಾರೆ.
ಚಿನ್ನಾಭರಣ ದೋಚಲು ಎರಡು ವರ್ಷದಿಂದ ಕಾದಿದ್ದ ಗ್ಯಾಂಗ್ ಕೊನೆಗೆ ಮನೆ ಮಾಲೀಕ ನಾಗೇಶ್ ಕುಟುಂಬಸ್ಥರು  ಹೊರಗಡೆ ಹೋಗಿದ್ದಾಗ ಕೃತ್ಯ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡ ಜಯನಗರ ಪೊಲೀಸರಿಂದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕಾಶ್ ಶಾಹಿ, ಅಪಿಲ್ ಶಾಹಿ, ಜಗದೀಶ್ ಶಾಹಿ ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ಅಕ್ಟೊಬರ್ 2 ರಂದು ಸಂಪಿಗೆ ಥಿಯೇಟರ್ ಮಾಲೀಕ ನಾಗೇಶ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದನ್ನು ಸ್ಮರಿಸಬಹುದಾಗಿದೆ.

ಏನಿದು ಪ್ರಕರಣ-
ನೇಪಾಳ ಮೂಲದ ಗಣೇಶ್ ಹಾಗೂ ಗೀತಾ ಎರಡು  ವರ್ಷದ ಹಿಂದೆ ನಾಗೇಶ್ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಮಾಲೀಕ ನಾಗೇಶ್ ಬಳಿ ನೇಪಾಳಿ ದಂಪತಿಗಳು ಸಾಕಷ್ಟು ನಂಬಿಕೆ ಹುಟ್ಟಿಸುವಂತೆ ನಾಟಕ ಮಾಡಿಕೊಂಡು ಬಂದಿದ್ದರು.

ಆದರೆ, ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿನದ ರಾತ್ರಿ ಈ ನೇಪಾಳಿ ದಂಪತಿ ತಮ್ಮ ಮಾಲೀಕ ನಾಗೇಶ್ ಮದ್ಯಪಾನ ಮಾಡುವ ವೇಳೆ ಮದ್ಯದಲ್ಲಿ ಬೆಂಜೊಡೈನ್ ಎಂಬ ಮತ್ತು ಬರುವ ಪೌಡರ್ ಮಿಕ್ಸ್ ಮಾಡಿ ಕೊಟ್ಟಿದ್ದರು.

ನಂತರ ಮಾಲೀಕ ನಾಗೇಶ ಅವರ ಮನೆಯ ಬಳಿ ಮೂವರನ್ನ ಕರೆಸಿಕೊಂಡಿದ್ದರು. ಮನೆಗೆ ಬಂದ ಕಳ್ಳರಿಗೆ ಮನೆಯಲ್ಲಿದ್ದ ಒಂದುವರೆ ಕೋಟಿಗೂ ಅಧಿಕ 2 ಕೆ.ಜಿ. ಚಿನ್ನಾಭರಣ, 2 ಲಕ್ಷ ರೂಪಾಯಿ ನಗದು ಹೊತ್ತೊಯ್ಯಲು ಸಹಾಯ ಮಾಡಿದ್ದರು.

ಬೆಂಗಳೂರು ಪೊಲೀಸರು ಸಿಸಿ ಟಿವಿ ಹಾಗೂ ಮೊಬೈಲ್ ನೆಟ್ವರ್ಕ್ ಆಧರಿಸಿ ಮುಂಬೈನಲ್ಲಿ ಆರೋಪಿಗಳ ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ದಂಪತಿ ಗಣೇಶ್ ಹಾಗೂ ಗೀತಾಳ ಹುಡುಕಾಟ ನಡೆಸಿದ್ದಾರೆ.

 

- Advertisement -  - Advertisement - 
Share This Article
error: Content is protected !!
";