ಕರ್ನಾಟಕ ಕಾಂಗ್ರೆಸ್ ನೇತೃತ್ವದ ಮನೆಹಾಳ ಸರ್ಕಾರ-ಅಶೋಕ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯದಲ್ಲಿ ಮೂರು‌ಕಡೆ ಬೈ ಎಲೆಕ್ಷನ್
, ಮಹಾರಾಷ್ಟ್ರದಲ್ಲಿ ಚುನಾವಣೆ ನಡೀತಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದ‌ಬಾರ್, ವೈನ್‌ಸ್ಟೋರ್ ಪಬ್ ಗಳಿಗೆ ದರ ಫಿಕ್ಸ್ ಮಾಡಿದೆ. 900 ಕೋಟಿ ಹಣವನ್ನು ಈ ಚುನಾವಣೆಗೆ ಕಲೆಕ್ಟ್ ಮಾಡಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದರು.

ಚಿತ್ರದುರ್ಗದಲ್ಲಿ‌ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಒಂದೇ ವಾರದಲ್ಲಿ ದಾಖಲೆ ರೀತಿ 18 ಕೋಟಿ ಗಿನ್ನಿಸ್ ದಾಖಲೆ ರೀತಿ ಹಣ ಸಂಗ್ರಹಿಸಿದ್ದಾರೆ. ಇಲಾಖೆಯ ಅಧಿಕಾರಿ ಹಾಗೂ ಕಮಿಶನರ್ ಗೆ ನಾವು ಶಹಭಾಶ್ ಗಿರಿ ಕೊಡಬೇಕು. ಇಂಥ ಪ್ರಳಯಾಂತಕರು ಕರ್ನಾಟಕವನ್ನು ಲೂಟಿ‌ಮಾಡ್ತಿದ್ದಾರೆ.

ಕರ್ನಾಟಕವನ್ನು ಎಟಿಎಂ ಮಾಡ್ಕೊಂಡು ಬೇರೆ ರಾಜ್ಯದ ಚುನಾವಣೆಗೆ ಹಣ ಬಳಕೆ ಮಾಡುವುದು ನಾಚಿಕೆಗೇಡಿನ ಸಂಗತಿ ಎಂದು ಅಶೋಕ್ ವಾಗ್ದಾಳಿ ಮಾಡಿದರು.

ಕೇರಳದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿ ಫೋಟೋ ಇರುವ ಅಕ್ಕಿ ಹಂಚುತ್ತಿದ್ದಾರೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡ್ತಿದ್ದಾರೆ. ಕೇರಳದ ವಯನಾಡಲ್ಲಿ‌ಸಾವಾದಾಗ ಕರ್ನಾಟಕದ‌ದುಡ್ಡು ಕೊಟ್ರು. ಕೇರಳದಲ್ಲೂ ಕೂಡ ಕರ್ನಾಟಕದ ಲಂಚಾವತಾರದ ಹಣ ಖರ್ಚು ಮಾಡಿದ್ದಾರೆಂದು ಅವರು ಟೀಕಿಸಿದರು.

ಉಪಚುನಾವಣೆಯಲ್ಲಿ ವೇದಿಕೆ‌ಮೇಲೆ‌ಜಮೀರ್ ರಾಜಾರೋಶವಾಗಿ ಹಣ ಹಂಚಿದ್ದಾನೆ. ಕಾಂಗ್ರೆಸ್ ಸರ್ಕಾರಕ್ಕೆ‌ಮಾನ‌ಮರ್ಯಾದೆ ಏನೂ ಇಲ್ಲ ಅಂತಾ ಕಾಣುತ್ತೆ. ಆದ್ರೂ ಸಿಎಂ ಜೀವನ ತೆರೆದ ಪುಸ್ತಕ, ವೈಟ್ ಪೇಪರ್ ಅಂತೆ. ಜಮೀರ್ ದುಡ್ಡು ಹಂಚಿದ್ದು ತೆರೆದ ಪುಸ್ತಕವಾ…? ಅವನೂ ತೆರೆದೇ ದುಡ್ಡು ಹಂಚಿದ್ದು, ವಯನಾಡಿಗೆ ಹೋದ ಅಕ್ಕಿಯನ್ನು ತೆರೆದೇ ಹಂಚಿದ್ದು ಎಂದು ಅಶೋಕ್ ತರಾಟೆ ತೆಗೆದುಕೊಂಡರು.

ಪ್ರಧಾನಿಗಳಿಗೆ ಮಾಹಿತಿ ಹೋಗಿರಲ್ವಾ-
ಕಳೆದ 25 ವರ್ಷಗಳಿಂದ ಡಿಕೆಶಿ ಬರೀ ಸಾಕ್ಷಿ ಗುಡ್ಡೆ ಕೇಳ್ತಿದ್ದಾರೆ. ಈಗ ದಾಖಲೆ ಸಹಿತ ದೂರು ಕೊಟ್ಟಿದ್ದಾರಲ್ಲ, 700 ಕೋಟಿ ಹಣ ಸಂಗ್ರಹ ಕುರಿತು ದೂರು ನೀಡಲಾಗಿದೆ. 18 ಕೋಟಿ ಹಣ ಸಂಗ್ರಹಿಸಿದ ಬಗ್ಗೆ ದೂರು ನೀಡಲಾಗಿದೆ. ಕಮಿಶನರ್
, ಡಿಸಿ ಗೆ ಎಷ್ಟು ಹಣ ಅಂತಾ ದೂರಲ್ಲಿ ಹೇಳಿದ್ದಾರೆ. ಅವರನ್ಯಾಕೆ‌ಹಿಡಿದು ಜೈಲಿಗೆ ಹಾಕಿಲ್ಲ…? ಎಂದು ವಿಪಕ್ಷ ನಾಯಕ ಪ್ರಶ್ನಿಸಿದರು.

ತೆರೆದ ಪುಸ್ತಕದಲ್ಲಿ ಅವನು ಸರುಕಾರದ ಅಕೌಂಟ್ ತೋರಿಸಿದ್ದಾನೆ. ಅವನ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳಿಗೆ ದುಡ್ಡಿನ ದಾಹ ಅತಿಯಾಗಿದೆ ಅಂತಾ ಮದ್ಯದಂಗಡಿಗಳ ಮಾಲೀಕರೇ ಹೇಳಿದ್ದಾರೆ. ಲಿಕ್ಕರ್ ಅಸೋಸಿಯೇಶನ್ 20ನೇ ತಾರೀಕು ಸ್ಟ್ರೈಕ್ ಕಾಲ್ ಮಾಡಿದ್ದಾರೆ.

ಇದನ್ನೆಲ್ಲ ನರೇಂದ್ರ ಮೋದಿ ಹೇಳಿ ಮಾಡ್ಸಿದ್ರಾ ಎಂದು ಅಶೋಕ್ ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಗುಡುಗಿದರು. ಲಿಕ್ಕರ್ ಅಸೋಸಿಯೇಶನ್ ದೂರು ಆಧರಿಸಿ ನರೇಂದ್ರ ಮೋದಿ 700 ಕೋಟಿ ರೂ. ಸಂಗ್ರಹ ಕುರಿತು ಹೇಳಿದ್ದಾರೆ. ನರೇಂದ್ರ ಮೋದಿ‌ಮೇಲೆ ಇವರು‌ಏಕವಚನದಲ್ಲಿ‌ಮುಗಿ ಬೀಳ್ತಾರೆ. ಈಗ 18 ಕೋಟಿ ಸಂಗ್ರಹ ಕುರಿತು ಅಧಿಕೃತ ದೂರು ನೀಡಿದ್ದಾರೆ. ಈಗ ಎಲ್ಲವೂ ಕೂಡ ಸಾಬೀತಾಗಿದೆಯಲ್ಲ. ಆದ್ರೆ ಮೋದಿ ಬಗ್ಗೆ ಅಧಿಕೃತ ದೂರು ಕೊಟ್ಟಿದ್ದಾರಾ..? ಎಂದು ಅವರು ಪ್ರಶ್ನಿಸಿದರು.

ಹುಟ್ಟಿದ್ರೂ, ಸತ್ರೂ, ಮದುವೆಯಾದ್ರೂ ಒಂದು ಎಸ್ಐಟಿ ಮಾಡ್ರಿ ಇದಕ್ಕೂ ಒಂದು SIT ಮಾಡಿ ಮುಚ್ಚಿಹಾಕಿ ಬಿಡಿ. ಹಿಂದೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಯ್ಯ ದೂರು ಕೊಟ್ಟಿದ್ರು. ಸಿದ್ದರಾಮಯ್ಯ ಪಂಚೆ ಎತ್ತಿಕೊಂಡು ಊರೂರು ಸುತ್ತಿದ್ರು. ಈಗ ಶೇ. 60 ರಷ್ಟು ಕೊಡಬೇಕು ಅಂತಾ ಅಧಿಕೃತ ಪತ್ರ ಬರೆದಿದ್ದಾರೆ.

ನಾವು ದಾಖಲೆ ಕೇಳಿದ್ರೆ ಕೆಂಪಣ್ಣ ಬದುಕಿರೋ ವರೆಗೂ ಕೊಡಲಿಲ್ಲ. ಕರ್ನಾಟಕದಲ್ಲಿರುವ ಸರ್ಕಾರ ಮನೆಹಾಳ ಸರ್ಕಾರ. ಕಾಂಗ್ರೆಸ್ ಸರ್ಕಾರವನ್ನು ಮನೆಹಾಳ ಸರ್ಕಾರ ಎಂದು ಆರ್. ಅಶೋಕ್ ಹರಿಹಾಯ್ದರು.

ಅಭಿವೃದ್ಧಿ ಕಾರ್ಯ ಮಾಡೋಕೆ ಸರ್ಕಾರದಲ್ಲಿ ಹಣ ಇಲ್ಲ. ಶಾಸಕರಿಗೆ, ಮಂತ್ರಿಗಳಿಗೆ, ಇಲಾಖೆಗೆ ಹಣ ಬರ್ತಿಲ್ಲ. ಅವರೆಲ್ಲ ಬಕ ಪಕ್ಷಿಗಳಂತೆ ಕಾದು ಕೂತಿದ್ದಾರೆ. ವರ್ಗಾವಣೆ ದಂಧೆಯಲ್ಲಿ ದುಡ್ಡು ಹೊಡೆಯುವ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಅಂಬೇಡ್ಕರ್ ಮುಸ್ಲಿಂ ಧರ್ಮಕ್ಕೆ ಸೇರಬೇಕು ಅಂದುಕೊಂಡಿದ್ರು ಎಂದು ಕಾಂಗ್ರೆಸ್ ನಾಯಕ ಖಾದ್ರಿ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅಶೋಕ್, ಮೊದಲು ಆ ಮುಸ್ಲೀಮರು ಹಿಂದೂ ಧರ್ಮ ಬಿಟ್ಟು ಮುಸ್ಲಿಮರು ಯಾವಾಗ ಆದ್ರು ತಿಳಿಯಲಿ. ಮುಸ್ಲಿಮರು ಇರಾಕಿಂದ ಬಂದವರು.

ಇರಾನ್, ಇರಾಕ್ ಡಿಎನ್ ಎ ಚೆಕ್‌ಮಾಡಿದ್ರೆ ಎಲ್ಲಾ ಗೊತ್ತಾಗುತ್ತೆ. ಗುಲಾಮ್ ನಬಿ ಆಜಾದ್ ನಾವೆಲ್ಲ ಹಿಂದೂಗಳು ಆದ್ರೆ ಕನ್ವರ್ಟ ಆಗಿದೀವಿ ಅಂದಿದ್ದಾರೆ. ಮೊದಲು ಇವರ ಡಿಎನ್ಎ ಗ್ಯಾರಂಟಿ ಇಲ್ಲ. ಅಂಬೇಡ್ಕರ್ ನಾನು ಪರಕೀಯ ಧರ್ಮ ಸೇರಲ್ಲ ಅಂದಿದ್ರು. ಭಾರತದಲ್ಲಿ ಹುಟ್ಟಿದ ಧರ್ಮ ಬೌದ್ಧ ಧರ್ಮ ಸೇರಿದ್ರು.

ಮುಸ್ಲಿಂ ಧರ್ಮಕ್ಕೆ ಹೋದ್ರೆ ದೇಶ ಭಯದ ವಾತಾವರಣದಲ್ಲಿರುತ್ತೆ ಅಂತಾ ಪದ ಬಳಕೆ‌ಮಾಡಿದ್ದಾರೆ. ಅಭದ್ರತೆ ಬರುತ್ತೆ ಅಂತಾ ಪದ ಬಳಕೆ‌ಮಾಡಿದ್ದಾರೆ. ದೇಶದ ಭದ್ರತೆ ದೃಷ್ಟಿಯಿಂದ ಕ್ರಿಶ್ಚಿಯನ್, ಮುಸ್ಲಿಂ ಧರ್ಮ ಸೇರಿಲ್ಲ. ಭಾರತದಲ್ಲಿ ಹುಟ್ಟಿದ ಬೌದ್ಧ ಧರ್ಮ ಸೇರಿದ್ರು ಎಂದು ಅಶೋಕ್ ತಿಳಿಸಿದರು.

ಕಾಂಗ್ರೆಸ್ ನವರಿಗೆ ಮಾನ ಮರ್ಯಾದೆ ಇಲ್ಲ. ಇದೇ ಅಂಬೇಡ್ಕರರನ್ನು ಮಹಾರಾಷ್ಟ್ರದಲ್ಲಿ ಸೋಲಿಸಿದ್ರು. ಕಾಂಗ್ರೆಸ್ ಹೇಳುವ ದೊಡ್ಡ ನಾಯಕ ನೆಹರು ಅಂಬೇಡ್ಕರ್ ವಿರುದ್ಧ ಭಾಷಣ ಮಾಡಿದ್ರು. ಸದನದಲ್ಲಿ ಗಲಾಟೆ ಮಾಡ್ತಾರೆ ಗೆಲ್ಲಿಸಬೇಡಿ ಅಂದ್ರು. ಈಗ ಅಂಬೇಡ್ಕರ್ ಪುಸ್ತಕ ಹಿಡ್ಕೊಂಡು ದಿನಾ ಓಡಾಡ್ತಾರೆ.

ಅಂಬೇಡ್ಕರ್ ರಿಗೆ ಕಾಂಗ್ರೆಸ್ ಮಾಡಿದ ಮೋಸ ಜನರಿಗೆ ಗೊತ್ತಿದೆ. ಈ ಆಟ ಮುಗದೋಯ್ತು, ಇನ್ನು ಮೇಲೆ‌ನಡೆಯಲ್ಲ. ಈ ಸರ್ಕಾರ ಬಹಳ ದಿನ ಉಳಿಯುವಂಥ ಸರ್ಕಾರ ಅಲ್ಲ. ಈಗಾಗಲೇ ಭ್ರಷ್ಟಾಚಾರ ಕೇಸಲ್ಲಿ ಎಲ್ಲರೂ ಸಿಕಾಕೊಂಡಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರ ಕುರಿರು ಅಧಿವೇಶನದಲ್ಲಿ ದೊಡ್ಡ ಚರ್ಚೆ ಮಾಡ್ತೀವಿ. ಕಳೆದ ಬಾರಿ ಉತ್ತರ ಕೊಡದೇ ಕಾಂಗ್ರೆಸ್ ನವರು  ಚರ್ಚೆಯಿಂದ‌ಪಲಾಯನ‌ಮಾಡಿದರು ಎಂದು ಆರ್.ಅಶೋಕ್ ಕಿಡಿ ಕಾರಿದರು.

ಈ ಬಾರಿಯೂ ಕಾಂಗ್ರೆಸ್ ನವರು ಪರ್ಮನೆಂಟ್ ಆಗಿ ಗಂಟು ಮೂಟೆ ಕಟ್ಕೊಂಡು ಓಡ್ತಾರೆ ಎಂದರು.
ಸಿದ್ಧರಾಮಯ್ಯನೇ 5 ವರ್ಷ ಸಿಎಂ ಆಗಿರ್ತಾರೆ ಎನ್ನುವ ಸಚಿವ ಜಮೀರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅಶೋಕ್, ಜಮೀರ್ ಯಾರ ಕಡೆ ಅಂತಾನೇ ಮೊದಲು ಗೊತ್ತಿಲ್ಲ. ಚನ್ನಪಟ್ಟಣದಲ್ಲಿ ಡಿಕೆಶಿ ನಾನೇ ಸಿಎಂ ಅಂತಾ ಪ್ರಚಾರ ಮಾಡ್ತಿದ್ದಾರೆ. ಕಾಂಗ್ರೆಸ್ ಪಾರ್ಟಿ ಇರತ್ತೆ ಅಂತಾ ಯಾವ ಗ್ಯಾರಂಟಿ.

ಹಿಂದೆ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಇದ್ದಾಗ 5 ವರ್ಷ ನಮ್ಮದೇ ಸರ್ಕಾರ ಅಂದ್ರು. ಕಾಂಗ್ರೆಸ್ ನಿಂದನೇ ಬಿಜೆಪಿಗೆ 14 ಜನ ಬಂದ್ರು. ಅವಾಗೇನು ಕಡ್ಲೇಕಾಯಿ ತಿಂತಿದ್ರಾ ಇವ್ರೂ. ಕಾಂಗ್ರೆಸ್ ಶಾಸಕರಿಗೆ 16 ತಿಂಗಳಿಂದ ಅಭಿವೃದ್ಧಿಗೆ ನಯಾ ಪೈಸೆ ಕೊಟ್ಟಿಲ್ಲ. ಸಿದ್ರಾಮಯ್ಯ ಜೊತೆ ಇದ್ರೆ ಕಡ್ಲೇಕಾಯಿಯೂ ಸಿಗಲ್ಲ ಅಂತಾ ಯೋಚನೆ ಮಾಡ್ತಿದ್ದಾರೆ. ಸರ್ಕಾರ ಬೀಳೋ ಬಗ್ಗೆ ಕೊನೆಯ ಒಂದು ತಿಂಗಳಲ್ಲಿ ಚರ್ಚೆ ಬರಬೇಕು.

ದಿನ ಬೆಳಗಾದ್ರೆ ಸಿಎಂ ಕುರ್ಚಿ ಮೇಲೆ ಟವಲ್, ಭ್ರಷ್ಟಾಚಾರ, ಸರ್ಕಾರ ಬೀಳುವ ಮಾತು. ಮಠಾಧೀಶರು, ಜೋತಿಷಿಗಳು, ರಾಜಕಾರಣಿಗಳು ಅದನ್ನೇ ನುಡಿತಾರೆ. ಈ ಮಧ್ಯೆ ಸಿದ್ದರಾಮಯ್ಯ ನಾನೇ ಇರ್ತೀನಿ ಅಂತಾ ಸಾವಿರ ಸಾರಿ ಹೇಳುತ್ತಾರೆ. ಯಾವ ಸಿಎಂ ಕೂಡ ಈ ರೀತಿ ಹೇಳಿಲ್ಲ, ಗಟ್ಟಿ ಇದ್ರೆ ಯಾರೂ ಹೇಳಲ್ಲ, ಜೊಳ್ಳು ಇದ್ರೆ ದಿನಾ ಹೇಳ್ಕೋಬೇಕು. ಸಿದ್ದರಾಮಯ್ಯ ಸರ್ಕಾರದ ಆಯಸ್ಸು ಎಕ್ಸಪೈರ್ ಆಗಿದೆ.

ಎಷ್ಟು ದಿನ ಇರತ್ತೋ ಸಿದ್ದರಾಮಯ್ಯ ಕಾಸು‌ಮಾಡ್ಕೊಂಡು ಹೋಗಬಹುದು. ಈ ಬಾರಿ ಕಾಂಗ್ರೆಸ್ ನಿಂದ ಶಾಸಕರು ಬಿಜೆಪಿಗೆ ಬರ್ತಾರಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಇಲ್ಲೇ ಇದ್ರೆ ಮುಂದಿನ ಚುನಾವಣೆಯಲ್ಲಿ ಡೆಪಾಸಿಟ್ ಬರಲ್ಲ. ಹಾಗಾಗಿ ಕಾಂಗ್ರೆಸ್ ಶಾಸಕರು ಯೋಚನೆ‌ಮಾಡ್ತಾರೆ ಎಂದು ಆರ್.ಅಶೋಕ್ ಹೇಳಿದರು.
ದಾವಣಗೆರೆಯವರು ನಾನು ಆತ್ಮಹತ್ಯೆ ಮಾಡ್ಕೊತೀನಿ ಅಂತಾ ಹೇಳಿದ್ದಾರೆ.

ಫ್ರೀ ಕೊಟ್ರೆ ನಾವು ಚೊಂಬು ಎತ್ಕೊಂಡು ಹೋಗಬೇಕಾಗುತ್ತೆ ಅಂತಾ ರಾಯರೆಡ್ಡಿ ಹೇಳಿದ್ದಾರೆ. ನಾನು ಒಂದು ಅಭಿವೃದ್ಧಿ ಕಾರ್ಯಕ್ಕೆ ಕಲ್ಲು ಹಾಕಿಲ್ಲ. ಜನ ನನ್ನ ತಲೆಯ‌ಮೇಲೆ‌ಕಲ್ಲು ಹಾಕ್ತಾರೆ ಅಂತಾ ಕಾಂಗ್ರೆಸ್ ಶಾಸಕ ಹೇಳಿದ್ದಾರೆ. ಇವೆಲ್ಲ ಕಾಂಗ್ರೆಸ್ ನವರ ನುಡಿಮುತ್ತುಗಳು.

ಕಾಂಗ್ರೆಸ್ ಸರ್ಕಾರ 16 ತಿಂಗಳಲ್ಲಿ 16 ಭ್ರಷ್ಟಾಚಾರದ ಅವತಾರ ತಾಳುತ್ತಿದೆ. ಇನ್ನೂ ಮುಂದೆ ಏನೇನು ಅವತಾರ ಬರುತ್ತೋ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ತಿಂಗಳಿಗೊಂದು ಸ್ಕ್ಯಾಂಡಲ್ ಗ್ಯಾರಂಟಿ ಆಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.

 

- Advertisement -  - Advertisement - 
Share This Article
error: Content is protected !!
";