ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಲಿಯೋಕೆ ಕೋಟಿ ಭಾಷೆ ಇದ್ದರೂ ಆಡೋಕೆ ಒಂದೇ ಭಾಷೆ ಅದೇ ಕನ್ನಡ.
ಕನ್ನಡ ಭಾಷೆ ತಾಯಿಗೆ ಸಮಾನವಾದದ್ದು. ಕನ್ನಡ ಭಾಷೆ,ಸಂಸ್ಕೃತಿ ನೆಲ-ಜಲವನ್ನು ಉಳಿಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ ಎಂದು ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕ ರವೀಂದ್ರ ನಾಯಕ್ ತಿಳಿಸಿದರು.
ತಾಲೂಕಿನ ಯಲ್ಲದಕೆರೆಯ
ಶ್ರೀ ಜ್ಞಾನಜ್ಯೋತಿ ಪ್ರೌಢಶಾಲೆಯಲ್ಲಿ ನಡೆದ ಕನ್ನಡ ಪ್ರಜ್ಞೆ – ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆಯ ಮುಖ್ಯಸ್ಥ ಬಿ.ಜಿ.ಮನೋಹರ್ ಮಾತನಾಡಿ ಕನ್ನಡದ ಏಕೀಕರಣ ಹಾಗೂ ಸ್ವತಂತ್ರ ಹೋರಾಟದಲ್ಲಿ ಕನ್ನಡಿಗರ ತ್ಯಾಗ ಬಲಿದಾನವನ್ನು ಸ್ಮರಿಸಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಆರ್ ಬಿ ಸುರೇಶ್ ಮಾತನಾಡಿ ಕನ್ನಡದ ಇತಿಹಾಸ, ಕನ್ನಡ ನಾಡು ನುಡಿ, ಭಾಷೆ ಕಲೆಗಾಗಿ ದುಡಿದ ಮಹನೀಯರ ಸಾಧನೆ ಕುರಿತು ಮಾತನಾಡಿದರು.
ವಿಶ್ವಮಟ್ಟದಲ್ಲಿ ಕನ್ನಡಿಗರ ಸಾಧನೆ ಕುರಿತು ಯಲ್ಲದಕೆರೆ ಸ್ವತಂತ್ರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮಂಜುನಾಥ್ ಮಕ್ಕಳಿಗೆ ಉಪನ್ಯಾಸ ನೀಡಿದರು.
ಶಿಕ್ಷಕ ಹರೀಶ್ ನಿರೂಪಿಸಿದರು. ಶಿಕ್ಷಕಿ ನಾಗವೇಣಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಂಗಸ್ವಾಮಿ ಟಿ.ರಂಗಸ್ವಾಮಿ ವಿ ಶಿಕ್ಷಕಿ ಸೌಮ್ಯ ಮತ್ತಿತರು ಉಪಸ್ಥಿತರಿದ್ದರು.