ಚಂದ್ರವಳ್ಳಿ ನ್ಯೂಸ್, ದೇವನಹಳ್ಳಿ:
ನಮ್ಮ ದೇಶದ ಮೊದಲ ಪ್ರಜೆ ರಾಷ್ಟ್ರಪತಿಯನ್ನು ಪ್ರಶ್ನಿಸುವ ಹಕ್ಕನ್ನು ಹೊಂದಿರುವುದು ಪತ್ರಕರ್ತರು ಮಾತ್ರ ಅಂತಹ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರ ಮೇಲೆ ಒಳ್ಳೆಯ ಗೌರವವಿದೆ ಹಾಗಾಗಿಯೇ ಜಿಲ್ಲಾ ಮಟ್ಟದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಪತ್ರಕರ್ತರು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ದೇವನಹಳ್ಳಿ ತಾಲೂಕು ಗ್ರೇಡ್ 2 ತಹಶೀಲ್ದಾರ್ ಉಷಾ ಆಶಯ ವ್ಯಕ್ತಪಡಿಸಿದರು.
ಪಟ್ಟಣದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ತಾಲೂಕು ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಸಮಾರಂಭ ನಡೆಯಿತು.
ಜಿಲ್ಲಾಧ್ಯಕ್ಷ ಜಿ. ಶ್ರೀನಿವಾಸ್ ಮಾತನಾಡಿ ಎಲ್ಲಾ ಸಮಯದಲ್ಲೂ ಯಾವುದೇ ಹಿಂಜರಿಕೆಯಿಲ್ಲದೇ ನಿರ್ಭಿತವಾಗಿ ಕಾರ್ಯನಿರ್ವಹಿಸುವಂತಹ ಪತ್ರಕರ್ತರನ್ನು ಜಿಲ್ಲಾಡಳಿತ ಗುರುತಿಸಿ ಕನ್ನಡರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.
ದೇವನಹಳ್ಳಿ ತಾಲೂಕು ಅಧ್ಯಕ್ಷ ಸುನೀಲ್.ವಿ ಮಾತನಾಡಿ ಸಮಾಜದ ಹಲವಾರು ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಪರಿಶೀಲಿಸಿ ತಮ್ಮ ವರದಿಗಾರಿಕೆಯ ಶೈಲಿಯಲ್ಲಿ ಸರ್ಕಾರಕ್ಕೆ ತಲುಪಿಸುವಂತಹ ಹಾಗೂ ಜನರಧ್ವನಿಯಾಗಿ ಬಹು ಮುಖ್ಯ ಕಾರ್ಯವನ್ನು ಮಾಡುವಂತಹ ವರದಿಗಾರರನ್ನು ಕನ್ನಡ ರಾಜ್ಯೋತ್ಸವಕ್ಕೆ ಆಯ್ಕೆ ಮಾಡಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕನ್ನಡಪ್ರಭ ವರದಿಗಾರ ಪಿಳ್ಳರಾಜು, ಟಿವಿ9 ವರದಿಗಾರ ನವೀನ್, ರಿಪಬ್ಲಿಕ್ ಕನ್ನಡ ವರದಿಗಾರ ಮಂಜುನಾಥ್, ವಿಜಯವಾಣಿ ವರದಿಗಾರ ಶಿವರಾಜು ರವರಿಗೆ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್, ಜಿಲ್ಲಾ ಉಪಾಧ್ಯಕ್ಷ ಮುರುಳಿ, ಜಿಲ್ಲಾ ನಿರ್ದೇಶಕರುಗಳಾದ ಎಸ್,ಮಹೇಶ್, ಮಂಜುನಾಥ್, ಆರ್.ಸತೀಶ್, ದೇವರಾಜು, ಡಿ.ಎನ್.ಸುರೇಶ್, ಶ್ರೀನಿವಾಸ್ ಗಾಂಧಿ, ನಾಗರಾಜು,
ತಾಲೂಕು ಉಪಾಧ್ಯಕ್ಷರಾದ ನರಸಿಂಹ, ಹರ್ಷ.ಪಿ ,ಖಜಾಂಚಿ ಹೈದರ್ ,ಕಾರ್ಯದರ್ಶಿ ಜಗದೀಶ್, ಸದಸ್ಯರುಗಳಾದ ಡಿ.ಎನ್.ನಾರಾಯಣಸ್ವಾಮಿ, ಭ್ರಮರಾಂಭಿಕಾ, ಭಾಸ್ಕರ್ ಬಾಬು, ಕೃಷ್ಣಮೂರ್ತಿ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗಿಯಾಗಿದ್ದರು.