ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರು / ಭಕ್ತಾಧಿಗಳ ಅನುಕೂಲಕ್ಕಾಗಿ ನವೆಂಬರ್ 29 ರಿಂದ
ಹೊಸದಾಗಿ ಬೆಂಗಳೂರು – ನೀಲಕ್ಕಲ್ (ಪಂಪಾ–ಶಬರಿಮಲೈ) ಮಾರ್ಗದಲ್ಲಿ ವೋಲ್ವೋ ವಾಹನವನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
ವಾಹನವು ಬೆಂಗಳೂರು ಶಾಂತಿನಗರ ಬಸ್ ನಿಲ್ದಾಣದಿಂದ ಅಪರಾಹ್ನ 1.50 ಗಂಟೆಗೆ ಹೊರಟು ನೀಲಕ್ಕಲ್ (ಪಂಪಾ – ಶಬರಿಮಲೈ) ಗೆ ಮರುದಿನ ಬೆಳಗ್ಗೆ 6.45 ಗಂಟೆಗೆ ತಲುಪಲಿದೆ.
ಅದೇ ರೀತಿ ವೇಳಾಪಟ್ಟಿಯಂತೆ ಕಾರ್ಯಾಚರಣೆ ಮಾಡಲಾಗುವುದು. ಅದೇ ರೀತಿ ನೀಲಕ್ಕಲ್ (ಪಂಪಾ–ಶಬರಿಮಲೈ) ನಿಂದ ಸಂಜೆ 6.00 ಗಂಟೆಗೆ ಹೊರಟು ಬೆಂಗಳೂರು ಶಾಂತಿನಗರ ಬಸ್ ನಿಲ್ದಾಣಕ್ಕೆ ಮರುದಿನ ಬೆಳಗ್ಗೆ 10.00 ಗಂಟೆಗೆ ತಲುಪಲಿದೆ.
ವಯಸ್ಕರಿಗೆ ಪ್ರಯಾಣದರ ರೂ. 1750 ನಿಗದಿಪಡಿಸಿದೆ. ಸಾರ್ವಜನಿಕ ಪ್ರಯಾಣಿಕರು / ಭಕ್ತಾಧಿಗಳು ಇದರ ಸದುಪಯೋಗಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.