ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾಬಾ ಸಾಹೇಬ್‌ಅಂಬೇಡ್ಕರ್‌ಅವರು ಸಂವಿಧಾನದಲ್ಲಿ ಕೋಮು ಆಧಾರಿತ ಧರ್ಮ ಆಧಾರಿತ ಮೀಸಲಾತಿಯನ್ನು ನೀಡಬಾರದು ಎಂದು ಹೇಳಿದ್ದಾರೆ. ಇದಕ್ಕೆ ಸಂವಿಧಾನದಲ್ಲಿ ಅವಕಾಶವೂ ಇಲ್ಲ.
ಅಂಬೇಡ್ಕರ್‌ವಿರೋಧಿ ಸಂವಿಧಾನ ವಿರೋಧಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮೀಸಲಾತಿಯನ್ನೇ ರದ್ದು ಮಾಡುವುದಾಗಿ ಹೇಳಿದ ಅಪ್ರಬುದ್ಧ ಮಂದ ಬುದ್ಧಿಯ ಬಾಲಕ ರಾಹುಲ್ ಗಾಂಧಿ ಅವರು ಸಂವಿಧಾನವನ್ನೇ ಬದಲಾವಣೆ ಮಾಡುವ ಯೋಜನೆಯಲ್ಲಿದ್ದಾರೆ ಎಂದು ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ಟ್ವೀಟ್ ಮಾಡಿ ಹರಿಹಾಯ್ದಿದೆ.
SC/ST/OBC ಸಮುದಾಯಗಳಿಗೆ ನೀಡಿರುವ ಮೀಸಲಾತಿಯನ್ನು ಕಿತ್ತು ಅದನ್ನು ತನ್ನ ವೋಟ್‌ಬ್ಯಾಂಕ್‌ಗೆ ನೀಡಲು ಕಾಂಗ್ರೆಸ್ ಬಹುದೊಡ್ಡ ಹುನ್ನಾರ ಮಾಡಿದೆ.
ಈಗಾಗಲೇ A1 ಭ್ರಷ್ಟ ಸಿದ್ದರಾಮಯ್ಯ ಅವರು ಜೈಲಿಗೆ ಹೋಗುವ ಮುನ್ನ ಮೊದಲ ಹಂತದಲ್ಲಿ ಸಿವಿಲ್‌ಕಾಮಗಾರಿಗಳಿಗೆ ಸಾರ್ವಜನಿಕ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆಯನ್ನು ಪರಿಶೀಲನೆ ಮಾಡುತ್ತಿದ್ದಾರೆ.
ದಲಿತ ವಿರೋಧಿ ಸಿದ್ದರಾಮಯ್ಯನವರು ಈಗಾಗಲೇ ದಲಿತರ ಅಧಿಕಾರ ಪರಿಶಿಷ್ಟರ ಅನುದಾನ ಆಸ್ತಿಪಾಸ್ತಿಯನ್ನು ಕಿತ್ತುಕೊಂಡಿದ್ದಾರೆ. ಇದೀಗ ಮೀಸಲಾತಿಯನ್ನು ಅವರಿಂದ ಕಿತ್ತು ಮುಸ್ಲಿಮರಿಗೆ ನೀಡುತ್ತಿದ್ದಾರೆ.
ಈಗಾಗಲೇ ಕಾಂಗ್ರೆಸ್‌ಆಡಳಿತವಿರುವ ತೆಲಂಗಾಣದಲ್ಲಿಯೂ ಮುಸ್ಲಿಮರಿಗೆ 4% ಮೀಸಲಾತಿ ನೀಡಲಾಗಿದೆ. ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ಮೀಸಲಾದ ಪಾಲನ್ನು ಮುಸ್ಲಿಮರು ತಿನ್ನುತ್ತಿದ್ದಾರೆ.
ದುಷ್ಟ ಕಾಂಗ್ರೆಸ್ಸಿನ ಷಡ್ಯಂತ್ರವನ್ನು ದೇಶದ ಜನ ಅರ್ಥ ಮಾಡಿಕೊಂಡು ಕಾಂಗ್ರೆಸ್‌ಅನ್ನು ಬುಡ ಸಮೇತ ಕಿತ್ತು ಹಾಕಬೇಕಿದೆ ಎಂದು ಬಿಜೆಪಿ ಕರೆ ನೀಡಿದೆ.