ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪೌರಾಣಿಕ ನಾಟಕಗಳು ಪುರಾತನದ ಸತ್ಯಸಾರುತ್ತದೆ ಐತಿಹಾಸಿಕ ನಾಟಕಗಳು ಇತಿಹಾಸವನ್ನು ತಿಳಿಸುತ್ತವೆ ಎಂದು ಕನ್ನಡ ಪ್ರಾಧಿಕಾರದ ಸದಸ್ಯ ತಿಮ್ಮೇಶ್ ತಿಳಿಸಿದರು.
ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನದ ನಾಟಕ ಸಂಗೊಳ್ಳಿ ರಾಯಣ್ಣ ಮತ್ತು ದುರ್ಗದ ದುರಂತ ಐತಿಹಾಸಿಕ ನಾಟಕಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಯಣ್ಣ ಅಪ್ರತಿಮ ವ್ಯಕ್ತಿ ಅಕ್ಷರಶಹ ಅತ್ಯುನ್ನತ ವ್ಯಕ್ತಿತ್ವ ಸುಸ್ತಾಜಿತ ಮತ್ತು ಏಳು ಅಡಿ ಎತ್ತರ ಅವರು ತಮ್ಮ ದೇಶಭಕ್ತಿ ರಾಣಿಗೆ ನಿಷ್ಠೆ ಬ್ರಿಟಿಷರ ವಿರುದ್ಧ ವೀರರ ಘೋಷಣೆಗಳು ಮತ್ತು ರಾಷ್ಟ್ರದ ಬಗ್ಗೆ ಅಚಲ ಬದ್ಧತೆಗಾಗಿ ಇಂದಿಗೂ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ ಎಂದರು.
ಚಿತ್ರದುರ್ಗವು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ. ಇತಿಹಾಸ ಸ್ಮಾರಕ ಕೇಂದ್ರವಾಗಿ ಬಿಂಬಿಸುತ್ತಿದ್ದು ಶೌರ್ಯ ಮತ್ತು ಪರಾಕ್ರಮಕೇ ಹೆಸರಾದ ಇತಿಹಾಸವನ್ನು ನಾಟಕಗಳ ಮೂಲಕ ಈಗಿನ ಪೀಳಿಗೆಗೆ ತಿಳಿಸುತ್ತಿರುವುದು ಸಂತಸದ ವಿಷಯ ಎಂದು ಸಿನಿಮಾ ನಿರ್ದೇಶಕ ಮಂಜುನಾಥ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ನಾಟಕ ಅಕಾಡೆಮಿ ಮಾಜಿ ಸದಸ್ಯ ವಿಟ್ಟಲ್ ಕೋಪಾಡ್, ಸಿನಿಮಾ ನಿರ್ದೇಶಕ ಮಂಜುನಾಥ್,ಚಲನಚಿತ್ರ ನಿರ್ಮಾಪಕ ದೊಡ್ಡಮನೆ ವೆಂಕಟೇಶ್, ಕಲಾವಿದ ಮಾ ಭಾಸ್ಕರ್, ನಾಗರಾಜು, ಸಂಸ್ಥೆ ಕಾರ್ಯದರ್ಶಿ ರುದ್ರೇಶ್ ಸೇರಿದಂತೆ ಮತ್ತಿತರ ಭಾಗಿಯಾಗಿದ್ದರು.