ಶಬರಿಮಲೆ ದೇವಸ್ಥಾನಕ್ಕೆ ತೆರಳಿದ್ದ ಭಕ್ತರ ಬಸ್ ಅಪಘಾತ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿ
, ಮೈಸೂರಿನ ಹುಣಸೂರಿಗೆ ಹಿಂದಿರುಗುವಾಗ ಮಂಗಳವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ 45 ಜನರಿದ್ದ ಬಸ್ ಭಕ್ತರ ಪೈಕಿ 27 ಮಂದಿಗೆ ಗಾಯವಾಗಿದೆ.

ಶಬರಿಮಲೆ ಯಾತ್ರೆ ಮಾಡಿ ಕರ್ನಾಟಕಕ್ಕೆ ವಾಪಸಾಗುತ್ತಿರುವಾಗ ಮಿನಿ ಬಸ್ ಪಲ್ಟಿಯಾಗಿದ್ದು, 27ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ಕೇರಳದ ವಯನಾಡಿನಲ್ಲಿ ನಡೆದಿದೆ.

ಕಿರಿದಾದ ತಿರುನೆಲ್ಲಿ ಥೆಟ್ಟು ರಸ್ತೆಯಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ. ಅಪಘಾತದಲ್ಲಿ ಹಲವಾರು ಪ್ರಯಾಣಿಕರಿಗೆ ಗಾಯಗಳಾಗಿವೆಶಬರಿಮಲೆಯಿಂದ ಕರ್ನಾಟಕಕ್ಕೆ ವಾಪಸಾಗುತ್ತಿರುವಾಗ ಯಾತ್ರಿಕರನ್ನು ಹೊತ್ತಿದ್ದ ಬಸ್ ಕೇರಳದ ವಯನಾಡಿನಲ್ಲಿ ಪಲ್ಟಿಯಾಗಿದ್ದು,

ಹಲವು ಮಂದಿ ಗಾಯಗೊಂಡಿದ್ದಾರೆ. ಶಬರಿಮಲೆಗೆ ಭೇಟಿ ನೀಡಿ ಹಿಂತಿರುಗುತ್ತಿದ್ದ ಕರ್ನಾಟಕದ ಯಾತ್ರಾರ್ಥಿಗಳ ಬಸ್ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ಪಲ್ಟಿಯಾಗಿದೆ. ಗಾಯಾಳುಗಳನ್ನು ವಿವಿಧ ವಾಹನಗಳಲ್ಲಿ ಮಾನಂತವಾಡಿ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಯಿತು.

ಸಹ ಪ್ರಯಾಣಿಕರು ಮತ್ತು ಸ್ಥಳೀಯ ನಿವಾಸಿಗಳು ಕೂಡಲೇ ರಕ್ಷಣಾ ಕಾರ್ಯಗಳನ್ನು ನಡೆಸಿದರು. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಘಟನಾ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";