ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಿ20 ದೇಶಗಳ ಪೈಕಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ ಭಾರತ! ಎಂದು ಬಿಜೆಪಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತದ ಆರ್ಥಿಕ ಪ್ರಗತಿಯು ನಾಗಾಲೋಟದಲ್ಲಿ ಸಾಗಿದೆ. ವಾರ್ಷಿಕ 7% ಜಿಡಿಪಿ ಪ್ರಗತಿಯೊಂದಿಗೆ ಭಾರತ ಮೊದಲ ಸ್ಥಾನವನ್ನು ಅಲಂಕರಿಸಿದೆ.
ಹಲವಾರು ವರ್ಷಗಳಿಂದ ಮೊದಲ ಸ್ಥಾನದಲ್ಲಿಯೇ ಇದ್ದ ಚೀನಾ ಕೇವಲ 4.8%, ಜಗತ್ತಿನಲ್ಲೇ ದೊಡ್ಡಣ್ಣ ಎನಿಸಿಕೊಳ್ಳುವ ಅಮೆರಿಕ 2.8% ನೊಂದಿಗೆ ಮೂರು ಮತ್ತು ಏಳನೆಯ ಸ್ಥಾನಕ್ಕೆ ಕುಸಿದಿದೆ. ಈ ಸಾಧನೆಯು ಭಾರತದ ಆರ್ಥಿಕ ದೃಢತೆಯನ್ನು ಸಾರುತ್ತದೆ ಎಂದು ಬಿಜೆಪಿ ತಿಳಿಸಿದೆ.