ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕವನದ ಶೀರ್ಷಿಕೆ
ತಲೆತಗ್ಗಿಸಿ ಬಾ
ತಲೆ ಎತ್ತಿ ಬಾಳುವಂತಾಗುವೆ…
ಕರುಣೆ ತೋರುತ್ತೇವೆಂದು
ತಮ್ಮ ದರ್ಪವನ್ನು
ನಮ್ಮ ಭಾಷೆ ನೆಲ ಜನರ ಮೇಲೆ ತೋರಿಸಿದರೆ
ಅಡಿ ಮುಟ್ಟಿ ನೋಡಿಕೊಳ್ಳಬೇಕಾದಿತ್ತು
ಎಚ್ಚರ…
ನಾವು ಕನ್ನಡದ ಕುಡಿಗಳು
ರಕ್ತದಲ್ಲಿ ಬಂದಿರುತ್ತದೆ
ಕನ್ನಡದ ಕಿಚ್ಚು
ಈ ನೆಲದ ಅನ್ನಕ್ಕೆ ಆ ತಾಯಿ
ಅಂತಹ ಪ್ರೀತಿಯನ್ನು ಬೇರೆಸಿರುತ್ತಾಳೆ
ನಮ್ಮ ಅಮ್ಮ ಕನ್ನಡತಿ
ಕೊಡುಗೈ ಆಕೆ
ಅಲ್ಲದ ಕೆಲಸಗಳು ಈ ನಾಡಿನಲ್ಲಿ ನಡೆದರೆ
ಕರಗಿಸುವಳು ಕರ್ಪೂರ ಉರಿದು ಮಸಿಯಾಗುವಂತೆ
ಬಡವ ಶ್ರೀಮಂತ
ಜಾತಿ ಮತವಿಲ್ಲ
ಕನ್ನಡ ಭಾಷೆ ಜೊತೆಗಿರುವಾಗ
ಬಡವ ಮೇಲು ಕೀಳೆಂಬ ಭಾವಗಳಿಗೆ ಸಲ್ಲದು ಮನ್ನಣೆ
ಇಂಥವುಗಳು ಕಣ್ಣಿಗೆ ಬಿದ್ದರೆ ಕತ್ತಿಡಿದು ನೂಕುವಳು
ಗಡಿನಾಡಿನಾಚೆಗೆ
ತಗ್ಗಿ ಬಂದರೆ
ನೆಲ ಜಲ ಅನ್ನ
ಇಲ್ಲವೇ
ನಿನ್ನ ನಾಡಿನಲ್ಲಿ
ನೀನ್ ಉಳಿದರೆ ಚೆನ್ನ
ಪಂಪ ರನ್ನ ಪೊನ್ನ ಜನ್ನ
ತಲೆಬಾಗಿ ನಮಿಸಿದರು ತಾಯಿಗೆ
ಕನ್ನಡವಾಗಿ ಉಳಿದರು ಶಾಶ್ವತವಾಗಿ
ತಾಯಿಯ ಮುಕುಟಮಣಿಯಾಗಿ
ಇದು ಕನ್ನಡ
ನಮ್ಮ ಭಾಷೆ ಕನ್ನಡ
ಸರಿತ.ಹೆಚ್, ತುಮಕೂರು, ಕಾಡುಮಲ್ಲಿಗೆ…