ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಡವರು ದೀನ ದಲಿತರಿಂದ ಹಣ ಕೊಳ್ಳೆ ಹೊಡೆದು ಸರ್ಕಾರ ಮುನ್ನಡೆಸುವ ದಯನೀಯ ಸ್ಥಿತಿಗೆ ಲೂಟಿಕೋರ ಕರ್ನಾಟಕ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ, ಇದೀಗ ಬಡವರ ಪಾಲಿಗೆ ನರಕವಾಗಿರುವ ಸರ್ಕಾರಿ ಆಸ್ಪತ್ರೆಗಳ ಸೇವಾ ಶುಲ್ಕವನ್ನು ಏರಿಕೆ ಮಾಡಿದೆ ಎಂದು ಬಿಜೆಪಿ ಆರೋಪ ಮಾಡಿದೆ.
ಬಿಪಿಎಲ್ಕಾರ್ಡ್ಹೊಂದಿರುವ ರೋಗಿಗೆ ಆಸ್ಪತ್ರೆಗಳ ಶುಲ್ಕದಲ್ಲಿ ರಿಯಾಯಿತಿ ಸಿಗುತ್ತಿತ್ತು. ಇದೀಗ ಅದನ್ನು ರದ್ದು ಮಾಡಿ ಆಸ್ಪತ್ರೆಗಳ ಸೇವಾ ಶುಲ್ಕವನ್ನು ಏರಿಸಿ ಬಡವರ ಹೊಟ್ಟೆ ಮೇಲೆ ಬರೆ ಏಳೆದಿದೆ.
ಬೆಲೆ ಏರಿಕೆ ಮಾಡಿ ದುಬಾರಿ ಆಡಳಿತ ನೀಡುತ್ತಿರುವ ಸ್ವಯಂಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯನವರೇ, ಆದಾಯ ಹೆಚ್ಚಾಗಿದೆ ಎಂದು ಬಿಪಿಎಲ್ರದ್ದು ಮಾಡುವ ನಿಮಗೆ ತಲೆಯಲ್ಲಿ ಸ್ವಲ್ಪ ಜ್ಞಾನ ಎನಾದರೂ ಇದೆಯೇ? ಎಂದು ಬಿಜೆಪಿ ಸಿಎಂ ಸಿದ್ದರಾಮಯ್ಯ ಅವರನ್ನು ಟೀಕಿಸಿದೆ.