ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕರ್ನಾಟಕವು ಬೆಲೆ ಏರಿಕೆಯ ರಾಜ್ಯವಾಗಿ ಮಾರ್ಪಟ್ಟಿದೆ! ಎಂದು ಜೆಡಿಎಸ್ ಆರೋಪಿಸಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಜನರ ಜೇಬಿಗೆ ಹೇಗೆಲ್ಲಾ ಕತ್ತರಿ ಹಾಕುತ್ತಿದೆ/ ಪಿಕ್ ಪಾಕೆಟ್ ಮಾಡುತ್ತಿದೆ ಎನ್ನುವುದಕ್ಕೆ ಸಾಕ್ಷಿಗಳು ಕಣ್ಣ ಮುಂದಿವೆ ಎಂದು ಜೆಡಿಎಸ್ ದೂರಿದೆ.
ಪೆಟ್ರೋಲ್ / ಡಿಸೆಲ್ : ಲೀ. 3 ಏರಿಕೆ (June 8, 2024), ನಂದಿನಿ ಹಾಲು :ಲೀ. 2 ಹೆಚ್ಚಳ (June 26, 2024), ವಿದ್ಯುತ್ : 1 ಯೂನಿಟ್ ಗೆ 2.89 ಏರಿಕೆ (June 2023), ಮದ್ಯ : ಶೇ. 20ರಷ್ಟು ಅಬಕಾರಿ ಸುಂಕ ಹೆಚ್ಚಳ (June 2023), ಸಾರಿಗೆ ಸೆಸ್: ವಾಣಿಜ್ಯ ವಾಹನಗಳ ಮೇಲೆ 3% ಏರಿಕೆ,
ಮುದ್ರಾಂಕ ಶುಲ್ಕ: ಶೇ.200-300 ಹೆಚ್ಚಳ ಹೀಗೆ ಹಾಲಿನಿಂದ ಇಂಧನದವರೆಗೆ, ವಿದ್ಯುತ್ ನಿಂದ ಸಾರಿಗೆ , ಆರೋಗ್ಯ ಸೇರಿದಂತೆ ಪ್ರತಿಯೊಂದು ದಿನಬಳಕೆಯ ಅಗತ್ಯ ವಸ್ತುಗಳು ಮತ್ತು ಸೇವೆಗಳು ಭ್ರಷ್ಟ ಕಾಂಗ್ರೆಸ್ ದುರಾಡಳಿತದಲ್ಲಿ ದುಪ್ಪಟ್ಟು , ದುಬಾರಿಯಾಗಿದೆ ಎಂದು ಜೆಡಿಎಸ್ ಆತಂಕ ವ್ಯಕ್ತ ಪಡಿಸಿದೆ.
ಕಾಂಗ್ರೆಸ್ ಗೆ ಅಧಿಕಾರ ಕೊಟ್ಟಿದ್ದಕ್ಕೆ ಕರ್ನಾಟಕದ ಜನರಿಗೆ ಏಕೆ ಬೆಲೆ ಏರಿಕೆ ಶಿಕ್ಷೆ? ಸಿದ್ದರಾಮಯ್ಯ ಅವರೇ ಇದೇನಾ ನೀವು ಭರವಸೆ ನೀಡಿದ ‘ಗ್ಯಾರಂಟಿ’? ಎಂದು ಟೀಕಿಸಿ ಬೆಲೆ ಏರಿಕೆ ಬರೆ, ಕಾಂಗ್ರೆಸ್ ಹಗಲು ದರೋಡೆ ಎಂದು ಟ್ಯಾಗ್ ಲೈನ್ ಹಾಕಿ ಟೀಕಿಸಿದೆ.