ಪಂಪ್ ಸೆಟ್ ಸಕ್ರಮಕ್ಕಾಗಿ ನಿಗದಿತ ಶುಲ್ಕ ಪಾವತಿಸಲು ಮನವಿ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಬೆಸ್ಕಾಂ ನಗರ ಉಪವಿಭಾಗ-೧
, , ; ಗ್ರಾಮೀಣ ಉಪವಿಭಾಗ-೧, ; ಗುಬ್ಬಿ ಹಾಗೂ ನಿಟ್ಟೂರು ಉಪವಿಭಾಗಗಳ ವ್ಯಾಪ್ತಿಯಲ್ಲಿ ಕೃಷಿ ನೀರಾವರಿ ಪಂಪ್ ಸೆಟ್‌ಗಾಗಿ ೫೦ ರೂ. ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಂಡಿರುವ ರೈತರು ಉಳಿದ ನಿಗದಿತ ಶುಲ್ಕ ೧೦,೦೦೦ ರೂ.ಗಳನ್ನು ಪಾವತಿಸಿ ಸಕ್ರಮೀಕರಣಗೊಳಿಸಿಕೊಳ್ಳಬಹುದಾಗಿದೆ.

ಗ್ರಾಹಕರು ನಿಗದಿತ ಶುಲ್ಕ ಹಾಗೂ ಅಗತ್ಯ ದಾಖಲೆಗಳನ್ನು ನವೆಂಬರ್ ೩೦ರೊಳಗಾಗಿ ಸಂಬಂಧಿಸಿದ ಉಪವಿಭಾಗ/ಶಾಖೆಗಳಿಗೆ ಸಲ್ಲಿಸಿ ಕೃಷಿ ನೀರಾವರಿ ಪಂಪ್ ಸೆಟ್‌ಗಳನ್ನು ಸಕ್ರಮೀಕರಣಗೊಳಿಸಿಕೊಳ್ಳಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಮನವಿ ಮಾಡಿದ್ದಾರೆ.

 

 

- Advertisement -  - Advertisement -  - Advertisement - 
Share This Article
error: Content is protected !!
";