ಕನ್ನಡ ರಥಯಾತ್ರೆ ಸ್ವಾಗತಕ್ಕಾಗಿ ಪೂರ್ವಬಾವಿ ಸಭೆ

News Desk

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
87 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ  ಅಂಗವಾಗಿ ಕನ್ನಡದ ಜ್ಯೋತಿ ಹೊತ್ತು ಕನ್ನಡದ ರಥ   ಯಾತ್ರೆ. ರಾಜ್ಯಾದ್ಯಂತ ಸಂಚರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ  ದೇವನಹಳ್ಳಿ ತಾಲ್ಲೂಕಿನಿಂದ ಯಿಂದ ಕುಂದಾಣ ಮಾರ್ಗವಾಗಿ   ತಾಲ್ಲೂಕಿನ ಹೃದಯ ಭಾಗವಾದ ಬಾಶೆಟ್ಟಿಹಳ್ಳಿ ಗೆ ಆಗಮಿಸಲಿರವ ಕನ್ನಡ ರಥ ಯಾತ್ರೆಗೆ  ಸ್ವಾಗತ  ಗೌರವ ಭದ್ರತೆಯೊಂದಿಗೆ ಬರಮಾಡಿ ಕೊಳ್ಳಲಾಗುವುದು.

  25 ನವಂಬರ್ 2024ರಂದು ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ತಂಗಲಿದ್ದು   ನ.26 ಬೆಳಗ್ಗೆ. 9.30 ಘಂಟೆಗೆ ಬಸವ ಭವನದಿಂದ  ಪ್ರಾರಂಭವಾದ ರಥ ಯಾತ್ರೆ  ಕನ್ನಡ ಜಾಗೃತಿ ಭವನ ತಾಲ್ಲೂಕು ಕಛೇರಿ  ಕೊಂಗಾಡಿಯಪ್ಪ ಕಾಲೇಜು  ಮಾರ್ಗವಾಗಿ ಮಧುರೆ ಹೋಬಳಿಯ ಕನಸವಾಡಿ ಮಾರ್ಗವಾಗಿ  ನೆಲಮಂಗಲ ತಾಲ್ಲೂಕಿಗೆ ಬೀಳ್ಕೊಡಿಗೆ  ಮಾಡಿ ಕೊಡಲಾಗುವುದು. 

 ಕನ್ನಡ ರಥ ಯಾತ್ರೆಗೆ  ತಾಲ್ಲೂಕಿನ ಕನ್ನಡ ಪರ ರೈತ ಪರ ದಲಿತ ಪರ ಸಂಘಟನೆಗಳು ಹಾಗು ಜನಪ್ರತಿನಿಧಿಗಳು  ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಸದಸ್ಯರುಗಳು ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿಯ ಪ್ರತಿನಿಧಿಗಳು ಸಾರ್ವಜನಿಕರು ಬಾಗವಹಿಸಿ ಕನ್ನಡ ರಥ ಯಾತ್ರೆಯನ್ನು ಬಹಳಷ್ಟು ಗೌರವ  ಪೂರ್ವಕವಾಗಿ ಕಾರ್ಯಕ್ರಮವನ್ನು ಯಶಸ್ವಿಗೂಳಿಸಬೇಕಾಗಿದೆ  ಎಂದು ತಾಲ್ಲೂಕು ಶಾಸಕ ದೀರಜ್ ಮುನಿರಾಜ್ ತಿಳಿಸಿದರು.

 ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ದುರ್ಗಾಶ್ರೀ ತಹಶೀಲ್ದಾರ್  ಶ್ರೀ ವಿದ್ಯಾ ವಿಭಾ ರಾಥೋಡ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋವಿಂದ ರಾಜ್  ಹಾಗು ಕನ್ನಡ ಪರ ರೈತ ಪರ ದಲಿತ ಪರ ಮತ್ತು ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";