ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ಪೂರ್ತಿವಾಹಿನಿಯ ಬರಹಗಳು-
ಶ್ರೀ ಎಚ್ ಡಿ ದೇವೇಗೌಡರನ್ನು ಹಾಗೂ ದಿವಂಗತ ಶ್ರೀ ಎಸ್ ಆರ್ ಬೊಮ್ಮಾಯಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಪ್ರಯತ್ನಿಸಿದರು ಶ್ರೀ ಎಸ್ ಎಂ ಕೃಷ್ಣ ಅವರು.
1980ರ ದಶಕದಲ್ಲಿ ಜನತಾ ಪರಿವಾರದ ಪ್ರಧಾನಿ ಚರಣ್ ಸಿಂಗ್ ಅವರು ಲೋಕಸಭೆಯಲ್ಲಿ ವಿಶ್ವಾಸ ಮತವನ್ನು ಯಾಚನೆ ಮಾಡುವ ಸಂದರ್ಭದಲ್ಲಿ ಲೋಕಸಭಾ ಗ್ಯಾಲರಿಯಲ್ಲಿ ದೇವೇಗೌಡರು ಬೊಮ್ಮಾಯಿ ಅವರು ಹಾಗೂ ಎಸ್ ಎಂ ಕೃಷ್ಣ ಅವರು ಜೊತೆಯಲ್ಲಿ ಇರುವಂತಹ ಸಂದರ್ಭದಲ್ಲಿ ಬೊಮ್ಮಾಯಿ ಹಾಗೂ ದೇವೇಗೌಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವಂತೆ ಕೃಷ್ಣ ಅವರು ಮನವಿ ಮಾಡಿದ್ದಾರೆ ಈ ವಿಚಾರದಲ್ಲಿ ದೇವೇಗೌಡರು ಹಾಗೂ ಬೊಮ್ಮಾಯಿ ಅವರು ನೋಡೊಣ ಯೋಚಿಸೋಣ ಎಂದು ಭರವಸೆಯನ್ನು ನೀಡಿದ್ದಾರೆ.
ದೇವೇಗೌಡರ ಹಾಗೂ ಬೊಮ್ಮಾಯಿ ಅವರ ಮಿತ್ರಕೂಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ವಿಚಾರದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣಕ್ಕೆ ಆ ವಿಚಾರ ಕೈಬಿಡಬೇಕಾಯಿತು. ದೇಶದ ತುರ್ತುಪರಿಸ್ಥಿತಿಯಲಿ ಸೆರೆವಾಸ ಅನುಭವಿಸಿ ಹಿಂದಿರುಗಿದ ದೇವೇಗೌಡರು.
ಕೆಲವು ದಿನಗಳ ನಂತರ ಎಸ್ ಎಂ ಕೃಷ್ಣ ಅವರನ್ನು ಭೇಟಿಯಾಗಿ ಜನತಾ ಪರಿವಾರದಲ್ಲಿ ಒಗ್ಗಟ್ಟಿಲ ಇವರೆಲ್ಲರನ್ನು ಸಂಭಾಳಿಸಿಕೊಂಡು ಪಕ್ಷವನ್ನು ಮುನ್ನಡೆಸುವುದು ಕಷ್ಟವಿದೆ ಆ ಕಾರಣಕ್ಕೆ ಕಾಂಗ್ರೆಸ್ ಸೇರ್ಪಡೆ ವಿಚಾರದಲ್ಲಿ ಚಿಂತಿಸುತ್ತಿರುವೆ ಎಂದು ಕೃಷ್ಣ ಅವರಿಗೆ ದೇವೇಗೌಡರು ವಿವರಿಸಿದ್ದಾರೆ.
ಆ ದಿನಗಳಲ್ಲಿ ದೇವೇಗೌಡರು ರಾಜ್ಯ ರಾಜಕೀಯದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಆ ದಿನಗಳಲ್ಲಿ ಮುಖ್ಯಮಂತ್ರಿಯಾಗಿದ್ದ ಶ್ರೀ ದೇವರಾಜ್ ಅರಸು ಅವರ ಆಡಳಿತದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುವ ಮೂಲಕ 18 ಗುರುತರವಾದ ಆರೋಪ ಮಾಡಿದ್ದರು.
ಈ ವಿಚಾರದಲ್ಲಿ ಕೃಷ್ಣ ಅವರು ದೇವೇಗೌಡರಿಗೆ ನೀವು ಮುಖ್ಯಮಂತ್ರಿ ದೇವರಾಜ್ ಅರಸು ವಿರುದ್ಧ ದೊಡ್ಡ ಪ್ರಮಾಣದ ಹೋರಾಟ ಮಾಡಿರುವಿರಿ ಈ ಸಮಯದಲ್ಲಿ ನೀವು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ವಿಚಾರ ತಪ್ಪು ಸಂದೇಶ ವಾಗುತ್ತದೆ ಎಂದು ಕೃಷ್ಣ ಅವರು ದೇವೇಗೌಡರಿಗೆ ಮನವರಿಕೆ ಮಾಡಿದ್ದಾರೆ.
ಈ ವಿಚಾರದಲ್ಲಿ ದೇವೇಗೌಡರು ಎಚ್ಚೆತ್ತುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ವಿಚಾರವನ್ನು ಕೈ ಬಿಟ್ಟರು. ಈ ಮಾಹಿತಿಯನ್ನು ಎಸ್ ಎಂ ಕೃಷ್ಣ ಅವರು ಅವರ ಜೀವನ ಚರಿತ್ರೆ ಪುಸ್ತಕವಾದ ಸ್ಪೂರ್ತಿವಾಹಿನಿಯಲ್ಲಿ ಬರೆದುಕೊಂಡಿದ್ದಾರೆ.
lekhana:ರಘುಗೌಡ 9916101265