ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅನ್ನದಾತರ ಸ್ವಾಭಿಮಾನದ ಬದುಕಿಗೆ ಕೊಳ್ಳಿಯಿಟ್ಟಿರುವ ಕರ್ನಾಟತ ಕಾಂಗ್ರೆಸ್ ಸರ್ಕಾರ, ಹಾಲು ಖರೀದಿಸುವ ವಿಚಾರದಲ್ಲೂ ಕೊಳಕು ರಾಜಕಾರಣ ಮಾಡುತ್ತಿದೆ! ಎಂದು ಸರ್ಕಾರದ ನಡೆ ವಿರುದ್ಧ ಬಿಜೆಪಿ ಟೀಕಿಸಿದೆ.
ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಅವರ ದ್ವೇಷ ರಾಜಕಾರಣಕ್ಕೆ ಕಾಡಂಕನಹಳ್ಳಿ ರೈತರ ಬದುಕು ಮೂರಾಬಟ್ಟೆಯಾಗಿದೆ. ನೂರಾರು ಲೀಟರ್ ಹಾಲನ್ನು ಬೀದಿಗೆ ಚೆಲ್ಲಿ ರೈತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯನವರೇ, ಕೂಡಲೇ ಬಡ ರೈತರ ಹಾಲು ಖರೀದಿಗೆ ಕ್ರಮ ವಹಿಸಿ! ಹಾಗೇ ಹಾಲು ಖರೀದಿ ವಿಚಾರದಲ್ಲಿ ಸಲ್ಲದ ರಾಜಕಾರಣ ಮಾಡುತ್ತಿರುವ ಸಚಿವರಿಗೂ ಸದಾಚಾರದ ಪಾಠ ಮಾಡಿ ಎಂದು ಬಿಜೆಪಿ ಮುಖ್ಯಮಂತ್ರಿಗಳಿಗೆ ತಾಕೀತು ಮಾಡಿದೆ.