ಕಾಂಗ್ರೆಸ್‌ಗೆದ್ದರೆ ಜನಾಧಿಕಾರ, ಸೋತರೆ EVM ಹ್ಯಾಕ್‌!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚುನಾವಣೆ ಸೋತ ನಂತರ ಆ ಸೋಲನ್ನು ಸ್ವೀಕರಿಸುವ ಮನೋಭಾವವನ್ನು ಇನ್ನೂ ಮೈಗೂಡಿಸಿಕೊಳ್ಳದ ಕಾರಣ ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಇಂದು ಹೀನಾಯವಾಗಿದೆ ಎಂದು ಬಿಜೆಪಿ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದೆ‌.

ಕರ್ನಾಟಕ, ತೆಲಂಗಾಣ, ಜಾರ್ಖಂಡ್‌ನಲ್ಲಿ ಇವಿಎಂ ಸರಿಯಿದೆ, ಮಹಾರಾಷ್ಟ್ರದಲ್ಲಿ ಸರಿಯಿಲ್ಲ! ಇದು ಯಾವ ರೀತಿಯ ಲಾಜಿಕ್?

ಇವಿಎಂ ಸುರಕ್ಷಿತ, ವಿಶ್ವಾಸಾರ್ಹ ಎಂದು ಸುಪ್ರೀಂ ಕೋರ್ಟ್‌‌ನಲ್ಲೂ ಸಾಬೀತಾಗಿದೆ. ಇವಿಎಂ ಹ್ಯಾಕ್ ಕುರಿತಂತೆ ಸಾಬೀತುಪಡಿಸಲು ಚುನಾವಣಾ ಆಯೋಗ ಮುಕ್ತ ಅವಕಾಶ ಸಹ ಕೊಟ್ಟಿತ್ತು ಆಗ ಎಲ್ಲಿ ಹೋಗಿದ್ದಿರಿ ಡಾ.ಜಿ.ಪರಮೇಶ್ವರ್ ಅವರೇ?

ಅಂದ ಹಾಗೆ, ಕಳೆದ ಬಾರಿ ಕೊರಟಗೆರೆ ಕ್ಷೇತ್ರದಲ್ಲಿ ತಾವು ಗೆದ್ದಾಗ ಇವಿಎಂ ಕುರಿತು ಅನುಮಾನ ಬಂದಿಲ್ಲವೇ? ಆ ಗೆಲುವಿನ ಬಗ್ಗೆ ಅನುಮಾನವಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ! ಎಂದು ಬಿಜೆಪಿ ತಾಕೀತು ಮಾಡಿದೆ.

- Advertisement -  - Advertisement -  - Advertisement - 
Share This Article
error: Content is protected !!
";