ದಾಸ ಶ್ರೇಷ್ಟ ಕನಕದಾಸರ ಜಯಂತಿ ಆಚರಣೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕು
,ತೂಬಗೆರೆ ಹೋಬಳಿ ಹಾಡೋನಹಳ್ಳಿ ಗ್ರಾಮದಲ್ಲಿ ದಾಸ ಶ್ರೇಷ್ಠ ಕನಕದಾಸರ ಅಭಿಮಾನಿ ಬಳಗದಿಂದ ಶ್ರೀ ಕನಕದಾಸರ 537ನೇ ಜಯಂತೋತ್ಸವ ಆಚರಣೆ ಮಾಡಲಾಯಿತು.

ಹಾಡೋನಹಳ್ಳಿ  ಗ್ರಾಮದ ಡೈರಿ ಮುಂಭಾಗದಲ್ಲಿರುವ ಸಮುದಾಯ ಭವನದಲ್ಲಿ ಅಯೋಜನೆ ಮಾಡಲಾದ ಕಾರ್ಯಕ್ರಮದಲ್ಲಿ  ಜಿಲ್ಲಾ ಪಂಚಾಯಿತಿ ಸದಸ್ಯ ಹಾಗು ಬೆಂಗಳೂರು ಹಾಲು ಉತ್ಪಾದಕರ ಸಹಕಾರದ ಸಂಘದ ಮಾಜಿ ಅಧ್ಯಕ್ಷ  ಎ ಅಪ್ಪಯ್ಯಣ್ಣ ಮಾತನಾಡಿ 

ಕನಕದಾಸರು ಬಡವ ಬಲ್ಲಿಗಾ  ಜಾತಿ ಜಾತಿಗಳ ನಡುವಿನ ತಾರತಮ್ಯವನ್ನು ಕಣ್ಣಾರೆ ಕಂಡು ಅಧಿಕಾರದ ಸಂಪತ್ತು  ಹಾಗು ಸಾಂಸಾರಿಕ ಪೂರೆಯನ್ನು ತೂರೆದು ತಾಳ ತಂಬೂರಿ ಹಿಡಿದು   ಸಮಾಜದಲ್ಲಿ ನೆಡೆಯುವ  ಅನ್ಯಾಯಗಳನ್ನು ತಮ್ಮ ಸಾಹಿತ್ಯ ಹಾಗು ಕೀರ್ತನೆಗಳ ಮೂಲಕ ಸಂದೇಶ ಈಗಿನ ಯುವ ಪೀಳಿಗೆಗೆ  ಆದರ್ಶವಾಗಿದೆ ಎಂದರು.

ಈ ಸಂದರ್ಭದಲ್ಲಿ ಸೂರ್ಯ ಕಾಲೇಜಿನ ಪ್ರಾಂಶುಪಾಲ ಎಂ ಸಿ ಮಂಜುನಾಥ ನಗರಸಭೆಯ ಉಪಾಧ್ಯಕ್ಷ ಎಂ‌.ಮಲ್ಲೇಶ ಸಂಗೂಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘ ಅಧ್ಯಕ್ಷ  ಎಲ್ ಐ ಸಿ ವೆಂಕಟೇಶ. ಕಾರ್ಯದರ್ಶಿ ರವಿ ಹಾಡೋನಹಳ್ಳಿ ಗ್ರಾಮ ನಿಕಟ ಪೂರ್ವ ಅಧ್ಯಕ್ಷ  ಎ ನಾಗರಾಜ್. ಮಾಜಿ ಸದಸ್ಯ ತಿರುಮಗೊಂಡನಹಳ್ಳಿ ಅಶೋಕ್  ಹಾಡೋನಹಳ್ಳಿ ಹಿರಿಯ ಮುಖಂಡರು ರೈಲ್ವೆ  ರಾಜಣ್ಣ  ಮಲ್ಲೇಶ ದಾಸ ಶ್ರೇಷ್ಠ ಕನಕದಾಸರ ಅಭಿಮಾನಿ ಬಳಗ ಪದಾಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು.

 

 

- Advertisement -  - Advertisement -  - Advertisement - 
Share This Article
error: Content is protected !!
";