ಈರುಳ್ಳಿ ವಿಮಾ ನೊಂದಣಿ ಆರಂಭ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2024-25
ನೇ ಸಾಲಿನ ಹಿಂಗಾರು ಹಂಗಾಮಿನ ಈರುಳ್ಳಿ ನೀರಾವರಿ ಬೆಳೆಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಬೆಳೆ ವಿಮೆ ನೊಂದಣಿ ಪ್ರಾರಂಭವಾಗಿದೆ.

ಚಿತ್ರದುರ್ಗ ತಾಲ್ಲೂಕು ಕಸಬಾ ಹಾಗೂ ತುರುವನೂರು, ಚಳ್ಳಕೆರೆ ತಾಲ್ಲೂಕಿನ ಕಸಬಾ ಹಾಗೂ ತಳಕು, ಹಿರಿಯೂರು ತಾಲ್ಲೂಕಿನ ಐಮಂಗಲ ಹಾಗೂ ಜೆ.ಜಿ.ಹಳ್ಳಿ ಹೋಬಳಿಗೆ ಈರುಳ್ಳಿ ನೀರಾವರಿ ಬೆಳೆಯನ್ನು ಅಧಿಸೂಚಿಸಲಾಗಿದೆ.

ಶೇ.90 ಇಡಿಮ್ಮಿಟಿ ಮಟ್ಟದ ನೀರಾವರಿ ಈರುಳ್ಳಿ ವಿಮೆ ಮೊತ್ತ ಹೆಕ್ಟೇರ್ಗೆ ರೂ.80500 ಇದ್ದು, ಇದರ ಶೇ.5 ರಷ್ಟು ರೈತ ವಿಮಾ ಕಂತು ರೂ.4025 ಆಗಿದೆ.

ದಿ ಓರಿಯಂಟಲ್ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ ವಿಮಾ ಕಂಪನಿಯಾಗಿ ಜಿಲ್ಲೆಗೆ ನಿಗಧಿಪಡಿಸಲಾಗಿದೆ. ಬೆಳೆ ವಿಮೆ ನೊಂದಣಿಗೆ ಡಿಸೆಂಬರ್ 30 ಕಡೆಯ ದಿನವಾಗಿದೆ. ರೈತರು ವಿಮೆಯನ್ನು ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ ಹಾಗೂ ಆರ್ಥಿಕ ಸಂಸ್ಥೆಗಳಲ್ಲಿ ನೊಂದಣಿ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಸಮೀಪದ ತೋಟಗಾರಿಕೆ ಇಲಾಖೆ ಕಚೇರಿ, ರೈತ ಸಂಪರ್ಕ ಕೇಂದ್ರ ಅಥವಾ ಹತ್ತಿರದ ಬ್ಯಾಂಕುಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";