ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲೋಕಸಭೆ ಚುನಾವಣೆಯಲ್ಲಿ ಸೋಲಿನ ಹ್ಯಾಟ್ರಿಕ್! ಮಹಾರಾಷ್ಟ್ರದಲ್ಲಿಯೂ ಸೋಲಿನ ಹ್ಯಾಟ್ರಿಕ್! ಮುಂದುವರೆದಿದೆ ಎಂದು ಜೆಡಿಎಸ್ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.
ಮರ್ಯಾದೆ ಉಳಿಸಿಕೊಳ್ಳಲು ಕರ್ನಾಟಕದ ಮೂರೇ ಸೀಟಿನ ಗಿಮಿಕ್!! ಮಾಡಲಾಗಿದೆ. ಸೋತು ಸೋತು ಸುಣ್ಣವಾಗಿರುವ ಕಾಂಗ್ರೆಸ್ ಪಕ್ಷವೀಗ ದೇಶಾದ್ಯಂತ ಪ್ರಾದೇಶಿಕ ಪಕ್ಷಗಳ ಬಾಲಂಗೋಚಿಯಾಗಿ ಮಾರ್ಪಟ್ಟಿದೆ ಎಂದು ಜೆಡಿಎಸ್ ದೂರಿದೆ.
ಬಾಲಂಗೋಚಿ ಪಟ್ಟಿ-
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ, ಶರದ್ ಪವಾರ್ ಬಾಲಂಗೋಚಿ, ಜಾರ್ಖಂಡ್ ನಲ್ಲಿ ಹೇಮಂತ್ ಸೊರೇನ್ ಬಾಲಂಗೋಚಿ, ಬಿಹಾರದಲ್ಲಿ ಲಾಲು ಬಾಲಂಗೋಚಿ, ಕಾಶ್ಮೀರದಲ್ಲಿ ಓಮರ್ ಅಬ್ದುಲ್ಲಾ ಬಾಲಂಗೋಚಿ, ತಮಿಳುನಾಡಿನಲ್ಲಿ ಡಿಎಂಕೆ ಬಾಲಂಗೋಚಿ,
ದೆಹಲಿಯಲ್ಲಿ AAP ಬಾಲಂಗೋಚಿ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಟ್ಟಿ ಬಾಲಂಗೋಚಿ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಬಾಲಂಗೋಚಿ, ಈ ಪಟ್ಟಿ ದೊಡ್ಡದಿದೆ ಎಂದು ಜೆಡಿಎಸ್ ಉದ್ದುದ್ದ ಪಟ್ಟಿ ನೀಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದೆ.
ಇನ್ನು, ಅನೇಕ ರಾಜ್ಯಗಳಲ್ಲಿ ಭಾರತೀಯ ಕಾಂಗ್ರೆಸ್ ಪಾರ್ಟಿಗೆ ನೆಲೆಯೂ ಇಲ್ಲ, ಬೆಲೆಯೂ ಇಲ್ಲ. ನಿಮ್ಮದು ನಾಯಿಪಾಡು ಎಂದು ಜೆಡಿಎಸ್ ತರಾಟೆ ತೆಗೆದುಕೊಂಡಿದೆ.
ಇಷ್ಟಾದರೂ ಶತಮಾನಗಳಿಂದ ತುಕ್ಕು ಹಿಡಿದು, ಒಂದೊಂದೇ ಪಕಳೆ ಉದುರುತ್ತಿದ್ದರೂ ಕಪಟಿ ಕಾಂಗ್ರೆಸ್ ಪಾಠ ಕಲಿತಿಲ್ಲ. ನಶಿಸುತ್ತಿರುವ ಪಾರ್ಟಿ ಯಾವುದು? ಕಣ್ಮರೆಯಾಗುತ್ತಿದೆ ಕಾಂಗ್ರೆಸ್ ಎಂದು ಜೆಡಿಎಸ್ ಕಿಡಿ ಕಾರಿದೆ.