ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಕಸ ವಿಲೇವಾರಿಯಲ್ಲೂ ಭಾರೀ ಭ್ರಷ್ಟಾಚಾರ! ನಡೆದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆ ಸಂಬಂಧ ಕರೆದಿದ್ದ ಟೆಂಡರ್ ನಲ್ಲಿ ಭಾಗವಹಿಸಿರುವ ಕೆಲ ಏಕನ್ಸಿ ಕಂಪನಿಗಳು ಬಿಡ್ ರಿಗ್ಗಿಂಗ್ ಮಾಡಿರುವುದು ಈಗ ಬಹಿರಂಗವಾಗಿದ್ದು, ಗುತ್ತಿಗೆದಾರರು ಬಿಡ್ ನಲ್ಲಿ ಅಂದಾಜು ಮೊತ್ತಕ್ಕಿಂತ ಶೇ.50-60% ಹೆಚ್ಚಾಗಿ ನಮೂದಿಸಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅವರು ಆರೋಪಿಸಿದ್ದಾರೆ.
ಬ್ರ್ಯಾಂಡ್ ಬೆಂಗಳೂರಿನ ನಿರ್ಮಿಸುತ್ತೇವೆ ಎಂದು ಕನ್ನಡಿಗರಿಗೆ ಅಂಗೈಯಲ್ಲೆ ಅರಮನೆ ತೋರಿಸಿ ಕಡೆಗೆ ಒಂದು ರಸ್ತೆ ಗುಂಡಿಯನ್ನೂ ಮುಚ್ಚದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಬಿಬಿಎಂಪಿಗೆ ಜನರು ಕಟ್ಟುವ ಸಾವಿರಾರು ಕೋಟಿ ತೆರಿಗೆ ಹಣವನ್ನ ಎಗ್ಗಿಲ್ಲದೆ ಲೂಟಿ ಹೊಡೆದು ಹೈಕಮಾಂಡ್ ಗೆ ಸಾಗಿಸುತ್ತಿದ್ದಾರೆ ಎಂದು ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.