ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯಾದಗಿರಿ ಜಿಲ್ಲೆಯ ಕೊಂಗಂಡಿ ಗ್ರಾಮದ ವಕ್ಪ್ ಬಾಧಿತ ಜಮೀನುಗಳಿಗೆ ಬುಧವಾರ ವಕ್ಫ್ ವಿರುದ್ಧ ಜನಾಂದೋಲನ ಹೋರಾಟ ನಿಮಿತ್ತವಾಗಿ ನಮ್ಮ ತಂಡದೊಂದಿಗೆ ತೆರಳಿ ಪರಿಶೀಲನೆ ನಡೆಸಿ, ರೈತರಿಂದ ಮನವಿಗಳನ್ನು ಪಡೆದು, ಸಮಸ್ಯೆ ಆಲಿಸಲಾಯಿತು ಎಂದು ಬಿಜೆಪಿ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ರೈತರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಲು ಬೃಹತ್ ಹೋರಾಟಕ್ಕೆ ಸಿದ್ದ ಇರುವುದಾಗಿ ರೈತರು, ರೈತ ಮುಖಂಡರು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಿ.ಎಂ.ಸಿದ್ದೇಶ್ವರ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ರಮೇಶ ಜಾರಕಿಹೊಳಿ, ಬಿ.ವಿ.ನಾಯಕ, ಬಿ.ಪಿ.ಹರೀಶ, ಎನ್.ಆರ್.ಸಂತೋಷ ರವರು ಸೇರಿದಂತೆ ಪಕ್ಷದ ಮುಖಂಡರು, ರೈತ ಮುಖಂಡರು, ವಕ್ಫ್ ಬಾಧಿತ ರೈತರು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.