ದಿಕ್ಕೆಟ್ಟ ನೀತಿಗಳಿಗೆ ಹಣ ಹೊಂದಿಸಲು ಒದ್ದಾಡುತ್ತಿರುವ ಸಿದ್ದರಾಮಯ್ಯ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ಯಾರಂಟಿಗಳಿಂದ ರಾಜ್ಯದ ಆರ್ಥಿಕತೆ ಹಳ್ಳ ಹಿಡಿಸಿರುವ ಕಾಂಗ್ರೆಸ್ ಸರ್ಕಾರದ ಬಳಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸುವುದಕ್ಕೂ ದುಡ್ಡಿಲ್ಲ! ಎಂದು ಬಿಜೆಪಿ ಆರೋಪಿಸಿದೆ.

ದಿಕ್ಕೆಟ್ಟ ನೀತಿಗಳಿಗೆ ಹಣ ಹೊಂದಿಸಲು ಒದ್ದಾಡುತ್ತಿರುವ ಸಿದ್ದರಾಮಯ್ಯನವರ ಸರ್ಕಾರ, ಮಕ್ಕಳಿಗೆ ಒಂದೇ ಜೊತೆ ಸಮವಸ್ತ್ರ ಸೀಮಿತಗೊಳಿಸಿದೆ. ಅಕ್ಟೋಬರ್‌ನಲ್ಲಿ  ವಿತರಿಸಬೇಕಾಗಿದ್ದ ಮತ್ತೊಂದು ಜೊತೆ ಸಮವಸ್ತ್ರ ನೀಡದೆ ಕೈತೊಳೆದುಕೊಂಡಿದೆ.

ಸ್ವಯಂ ಘೋಷಿತ ಆರ್ಥಿಕ ತಜ್ಙ ಸಿದ್ದರಾಮಯ್ಯನವರೇ, ವಿವೇಚನೆಯಿಲ್ಲದ ನೀತಿಗಳಿಂದ ರಾಜ್ಯದ ಆರ್ಥಿಕತೆಯ ತೇರು ನಿಂತು ಹೋಗಿದೆ. ದಿವಾಳಿ ಘೋಷಣೆಯಷ್ಟೇ ಬಾಕಿ ಉಳಿದಿರುವುದು, ತಾವು ಕುರ್ಚಿಯಿಂದ ತೊಲಗದ ಹೊರತು, ಕನ್ನಡಿಗರಿಗೆ ನೆಮ್ಮದಿ ಸಿಗದು! ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ಮಾಡಿದೆ.

 

 

- Advertisement -  - Advertisement -  - Advertisement - 
Share This Article
error: Content is protected !!
";