ನ.28ರಂದು ವಿದ್ಯುತ್ ವ್ಯತ್ಯಯ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರ ಉಪವಿಭಾಗ ಘಟಕ2 ವ್ಯಾಪ್ತಿಯಲ್ಲಿ ಬರುವ ಎಫ್15 ಮಿಲ್ ಏರಿಯಾ ಮಾರ್ಗದ ಎಂ.ಕೆ ಪ್ಯಾಲೇಸ್ ಮುಂಭಾಗದ ರಸ್ತೆ ಅಗಲೀಕರಣ ಕಾಮಗಾರಿಗೆ ಅಡ್ಡಲಾಗಿರುವ 11 ಕೆ.ವಿ/ ಎಲ್.ಟಿ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿ ಚಿತ್ರದುರ್ಗ ನಗರಸಭೆ ಅವರು  ನಿರ್ವಹಿಸುತ್ತಿರುವುದರಿಂದ ಇದೇ .28ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

- Advertisement - 

ವಿದ್ಯುತ್ ಅಡಚಣೆಗೆ ಒಳಪಡುವ ಪ್ರದೇಶಗಳು: ಎಫ್15 ಮಿಲ್ ಏರಿಯಾದ ಎಂ.ಕೆ ಪ್ಯಾಲೇಸ್ ಹತ್ತಿರ, ರೈಲ್ವೇ ಸ್ಟೇಷನ್, ಚೋಳಗುಡ್ಡ, ನೆಹರು ನಗರ, ಅಗಸನಕಲ್ಲು, ತಾಜ್ಪೀರ್ ಲೇಔಟ್, ಆಶ್ರಯ ಬಡಾವಣೆ ಹಂತ1 ಮತ್ತು ಹಂತ2, ಇಟಗಿ ಚನ್ನಬಸಪ್ಪ ಲೇಔಟ್, ಸದಾನಂದಯ್ಯ ಬಡಾವಣೆ,

- Advertisement - 

ದವಳಗಿರಿ ಬಡಾವಣೆ 3ನೇ ಹಂತ, ವಿದ್ಯಾಶ್ರೀ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು, ಗ್ರಾಹಕರು ಸಹಕರಿಸಬೇಕೆಂದು ಚಿತ್ರದುರ್ಗ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement - 
Share This Article
error: Content is protected !!
";