ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬೆಳಗಟ್ಟ ಗ್ರಾಮದಲ್ಲಿ ತಾಲೂಕು ಆಡಳಿತ
, ಸಮಾಜ ಕಲ್ಯಾಣ ಇಲಾಖೆ ಗ್ರಾಮ ಪಂಚಾಯಿತಿ ಬೆಳಗಟ್ಟ  ಪೊಲೀಸ್ ಇಲಾಖೆ  ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯಿದೆ ಸಮಿತಿ ಹಾಗೂ ಜನದನಿ ಸೇವಾ ಟ್ರಸ್ಟ್ ಇವರ ಸಂಯುಕ್ತಾಶ್ರದಲ್ಲಿ ಬೆಳಗಟ್ಟ ಗ್ರಾಮ ಪಂಚಾಯಿತಿಯಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.

 ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಗೇಂದ್ರಪ್ಪ ಮಾತನಾಡಿ, ಸಮಾಜದಲ್ಲಿ ಎಲ್ಲರೂ ಸಮಾನರು. ಎಲ್ಲರನ್ನೂ ಗೌರವದಿಂದ ಕಾಣಬೇಕು. ಬುದ್ಧ ಬಸವ ಅಂಬೇಡ್ಕರ್ ಅವರಂತ ಮಹಾನ್ ನಾಯಕರು ಹುಟ್ಟಿದ ನಾಡು ನಮ್ಮದು. ಇಂತಹ ನಾಡಲ್ಲಿ ಇನ್ನು ಅಸ್ಪೃಶ್ಯತೆ ಆಚರಣೆ ಜೀವಂತವಾಗಿರುವುದು ದುರಂತವೇ ಸರಿ ಎಂದರು.

ಇಂಥ ಆಚರಣೆಗಳನ್ನು ಹೋಗಲಾಡಿಸುವುದಕ್ಕೆ ಸಮಾಜ ಕಲ್ಯಾಣ ಇಲಾಖೆ ಈ ತರಹದ ಅರಿವು ಕಾರ್ಯಕ್ರಮಗಳನ್ನು ಮಾಡುತ್ತಿದೆ. ಜನರಿಗೆ ಕಾನೂನು ಅರಿವು ಮೂಡಿಸುವಲ್ಲಿ ಸಮಾಜ ಕಲ್ಯಾಣ ಇಲಾಖೆ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಮರಕಂಬಿ 101 ಜನರಿಗೆ ದಲಿತ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆ ಆಗಿರುವುದನ್ನ ಜ್ಞಾಪಿಸಿದ ಅವರು, ತುಮಕೂರಿನ 20ಕ್ಕೂ ಹೆಚ್ಚು ಜನಕ್ಕೆ ಶಿಕ್ಷೆ ಆಗಿರುವುದನ್ನು ಕೂಡ ಜನರಿಗೆ ತಿಳಿಸಿ ಇಂತಹ ಅನಿಷ್ಟ ಪದ್ದತಿಗಳನ್ನು ದಯವಿಟ್ಟು ಆಚರಿಸಬೇಡಿ ಎಂದು ಜನರಿಗೆ ಜಾಗೃತಿ ಮೂಡಿಸಿದರು.

ತುರುವನೂರು ಸಿಪಿಐ ಲತಾ ಮಾತನಾಡಿ ಕಾನೂನುಗಳು ಅತ್ಯಂತ ಪ್ರಬಲವಾಗಿವೆ. ಯಾವುದೋ ಹಳೆಯ ಆಚರಣೆಗಳನ್ನು ಕಾನೂನಿನ ಅರವಿಲ್ಲದೆ ಬಳಸಿಕೊಂಡು ಬಂದಿರುವಂತಹ ಅನಿಷ್ಟ ಅಸ್ಪೃಶ್ಯತೆ ಆಚರಣೆಯನ್ನು ಯಾರೂ ಮಾಡಬಾರದು ಮಾಡಿದ್ದಲ್ಲಿ ಕಾನೂನು ಶಿಕ್ಷೆ ನೀಡುತ್ತದೆ ಎಂದರು.
ಠಾಣೆಗಳು ನಿಮಗಾಗಿ ಇವೆ. ಧೈರ್ಯವಾಗಿ ಬಂದು ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಿ ಎಂದು ಜನರಿಗೆ ಆತ್ಮಸ್ಥೈರ್ಯ ತುಂಬಿದರು.

 ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ವಿಶಾಲಾಕ್ಷಿ ಮಾತನಾಡಿ ಅಸ್ಪೃಶ್ಯತೆ ಆಚರಣೆ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಲ್ಲ. ನಮ್ಮ ಜನರು ಅತ್ಯಂತ ವಿಶಾಲ ಹೃದಯದವರು. ಇಲ್ಲಿ ಆ ತರಹದ ಆಚರಣೆಗಳು ಕಂಡುಬಂದಿಲ್ಲ ಎಂದರು.
ಜನನಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಅವಿನಾಶ್ ಸಿ ಎಲ್ ಮಾತನಾಡಿ ಎಸ್ಸಿ ಎಸ್ಟಿ ದೌರ್ಜನ್ಯ ಮತ್ತು ಅಸ್ಪೃಶ್ಯತೆ ಆಚರಣೆ ಭಾರತದಲ್ಲಿ ಮಾತ್ರವೇ ಜೀವಂತವಾಗಿದೆ. ಇದನ್ನು ಸಂಪೂರ್ಣವಾಗಿ ತೊಲಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಬೀಸುವ ಗಾಳಿ ಹರಿಯುವ ನೀರು ಮನುಷ್ಯನ ಮೈಯಲ್ಲಿ ಹರಿಯುವ ರಕ್ತ ಇವುಗಳಿಗೆ ಇಲ್ಲದ ಭೇದ ಮನುಷ್ಯನಲ್ಲಿ ಏಕೆ ಇದು ಮುಂದುವರಿಯಬಾರದು ಕಾನೂನು ಪ್ರಬಲವಾಗಿದೆ ಜನರು ಜಾಗೃತರಾಗಬೇಕು ಎಂದು ಜನರಲ್ಲಿ ಅರಿವು ಮೂಡಿಸಿದರು.

ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಮಂಜಣ್ಣ, ಉಪ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮುಸ್ತೂರಪ್ಪ, ಜನದನಿ ಸೇವಾ ಟ್ರಸ್ಟ್, ಕಲಾತಂಡ, ವಕೀಲರು  ಗೋವಿಂದರಾಜು, ವೆಂಕಟೇಶ್ ಇತರರು ಹಾಜರಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";