20 ವರ್ಷದ ಪುತ್ರಿ ಮದುವೆಯಾಗಿದ್ದ 46 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಕೊಂದು ಹಾಕಿದ ದುಷ್ಟರು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
20 ವರ್ಷದ ಯುವತಿ ಮದುವೆಯಾಗಿದ್ದ 46 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಕೊಂದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಜರುಗಿದೆ.

ಯುವತಿಯ ಕುಟುಂಬದ ಆರು ಮಂದಿ ಪೋಷಕರನ್ನು ಕೊಲೆ ಆರೋಪದ ಮೇಲೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಅಲ್ಲದೆ ಇತರೆ 20 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿ ಮುಂದಿನ ತನಿಖೆ ಆರಂಭಿಸಿದ್ದಾರೆ.

20 ವರ್ಷದ ಯುವತಿ ಮದುವೆಯಾಗಿದ್ದ ಚಿತ್ರದುರ್ಗ ನಗರ ಸಮೀಪದ ಕೊಣನೂರು ಗ್ರಾಮದ ನಿವಾಸಿ ಮಂಜುನಾಥ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಚಿತ್ರದುರ್ಗ ತಾಲೂಕಿನ ಭರಮಸಾಗರ ಪೊಲೀಸರು ಇತರೆ 20 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು ಪ್ರಕರಣದ ತನಿಖೆ ಆರಂಭಿಸಿದ್ದಾರಲ್ಲದೆ ಕೊಲೆಗೆ ಸಾಥ್ ನೀಡಿರುವ ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಮೃತ ಮಂಜುನಾಥ್‌ಗೆ ಇದು ಎರಡನೇ ಮದುವೆಯಾಗಿದ್ದು
, ಈ ಶಿಲ್ಪಾ ಎಂಬಾಕೆಯನ್ನು ಮದುವೆಯಾಗಿ ಮೋಸ ಮಾಡಿದ್ದಾನೆ ಎನ್ನಲಾಗಿದೆ.

ಪತ್ನಿ ಶಿಲ್ಪಾ ಅವಳನ್ನು ಪ್ರೀತಿಸಿ ಮದುವೆಯಾಗಿದ್ದ ಮಂಜುನಾಥ್, ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಮೊದಲ ಪತ್ನಿ ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಮಂಜುನಾಥ್ ಜೈಲು ಸೇರಿ 6 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದ.

ಜೈಲಿನಿಂದ ಹೊರಬಂದ ನಂತರ, ಪಕ್ಕದ ಮನೆಯ ಯುವತಿ ರಕ್ಷಿತಾಳೊಂದಿಗೆ ಪ್ರೀತಿ ಬೆಳೆಸಿಕೊಂಡಿದ್ದ ಮಂಜುನಾಥ್​, ಯುವತಿ ಮನೆಯವರ ವಿರೋಧಿದಿಂದಾಗಿ ಓಡಿ ಹೋಗಿ ಆಕೆಯೊಂದಿಗೆ ಮದುವೆ ಮಾಡಿಕೊಂಡಿದ್ದರು.

ಆದರೆ ಓಡಿ ಹೋಗಿದ್ದ ಯುವತಿ ರಕ್ಷಿತಾಳಿಗೆ ಪೋಷಕರು ಕರೆ ಮಾಡಿ ಎಲ್ಲರ ಸಮ್ಮುಖದಲ್ಲೇ ಮದ್ವೆ ಮಾಡಿಕೊಡುವುದಾಗಿ ಪುಸಲಾಯಿಷಿ ಮನೆಗೆ ಕರೆಯಿಸಿದ್ದಾರೆ. ಬಳಿಕ ಯುವತಿಯ ಪೋಷಕರು, ಮಂಜುನಾಥನ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಯಕನಹಟ್ಟಿಯ ಹೊಸಗುಡ್ಡ ದೇವಸ್ಥಾನದಲ್ಲಿ ಮಂಜುನಾಥ್ 20 ದಿನಗಳ ಹಿಂದೆ ಯುವತಿ ರಕ್ಷಿತಾಳೊಂದಿಗೆ ಮದುವೆಯಾಗಿದ್ದ.

ಯುವತಿಯ ಮನೆಯವರು ಮಂಜುನಾಥ್ ನನ್ನು ಕೊಲ್ಲಲು ಸಂಚು ರೂಪಿಸಿದ್ದರು.  ಎಲ್ಲರ ಸಮ್ಮುಖದಲ್ಲೇ ಮಗಳು ಹಾಗೂ ಮಂಜುನಾಥ್ ಅವರಿಗೆ ಮದುವೆ ಮಾಡಿಕೊಡುವುದಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ.

ಯುವತಿಯನ್ನು ವಾಪಸ್ ಮನೆಗೆ ಕರೆದೊಯ್ದಿದ್ದು, ಬುಧವಾರ ಮಂಜುನಾಥ್ ಅವರ ನಿವಾಸಕ್ಕೆ ಆಗಮಿಸಿದಾಗ ಪತ್ನಿಯ ಕುಟುಂಬಸ್ಥರು ದೊಣ್ಣೆ, ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.

ಮಂಜುನಾಥ್ ಸಾವಿಗೂ ಮುನ್ನ ಯುವತಿಯು ಪತಿ ಮಂಜುನಾಥ್ ಜತೆ ನಡೆಸಿದ ಸಂಭಾಷಣೆಯ ಆಡಿಯೋ ಕ್ಲಿಪ್‌ವೈರಲ್ ಆಗಿದ್ದು, ತನ್ನ ನಿವಾಸಕ್ಕೆ ಬಂದು ತನ್ನನ್ನು ಕರೆದುಕೊಂಡು ಹೋಗುವಂತೆ ಒತ್ತಾಯಿಸಿದ್ದಾಳೆ. ಹೀಗಾಗಿ ಮಂಜುನಾಥ್ ಪತ್ನಿಯನ್ನು ಕರೆದುಕೊಂಡು ಹೋಗಲು ಒಪ್ಪುತ್ತಾನೆ. ಕೊನೆಗೂ ಬುಧವಾರ ಸಂಜೆ ವೇಳೆ ಮಂಜುನಾಥ್ ಊರಿಗೆ ಬಂದಿದ್ದು, ಈ ವಿಚಾರ ತಿಳಿದ ಯುವತಿ ಪೋಷಕರು ಮನೆಗೆ ನುಗ್ಗಿ ಮಂಜುನಾಥನ ಮೇಲೆ ಆಯುಧಗಳಿಂದ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.

6 ಆರೋಪಿಗಳ ಬಂಧನ-
ಭರಮಸಾಗರ ಪೊಲೀಸ್ ಠಾಣೆಯಲ್ಲಿ ಯುವತಿ ರಕ್ಷಿತಾ ತಂದೆ ಜಗದೀಶ್ ಮತ್ತು ಇಪ್ಪತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಈಗಾಗಲೇ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಸವರಾಜಪ್ಪ
, ಶಂಕರಮ್ಮ, ಕಾವ್ಯ, ದಿವ್ಯ, ಪ್ರಸನ್ನ, ಹರ್ಷ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಮುಖ ಆರೋಪಿ ಜಗದೀಶ್ ಸೇರಿದಂತೆ ಮತ್ತಿತರರ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭರಮಸಾಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದು ಇತರೆ ಕೊಲೆ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";