ಚಂದ್ರವಳ್ಳಿ ನ್ಯೂಸ್ , ಹಿರಿಯೂರು:
ಹಿರಿಯೂರು ಶ್ರೀತೇರುಮಲ್ಲೇಶ್ವರ ಸ್ವಾಮಿ ಕೃಪಾ ಪೋಷಿತ ಎಲ್ ಐಸಿ ಕಲಾ ಬಳಗದ ವತಿಯಿಂದ ಎಲ್ ಐಸಿ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಸಂಘ, ಎಲ್ ಐಸಿ ಪ್ರತಿನಿಧಿಗಳ ಸಂಘ, ಎಲ್ ಐಸಿ ಹಿರಿಯೂರು ಮತ್ತು ಹೊಸದುರ್ಗ ಇವರುಗಳ ಸಹಕಾರದಲ್ಲಿ
ನವೆಂಬರ್-30 ಶನಿವಾರ ರಾತ್ರಿ 7.30ಗಂಟೆಗೆ ಹಿರಿಯೂರು ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಎದುರಿನ ಗುರುಭವನದ ಹಿಂಭಾಗದ ಸರ್ಕಾರಿ ಮಹಿಳಾ ಜೂನಿಯರ್ ಕಾಲೇಜ್ ಸಭಾಂಗಣದಲ್ಲಿ ಪೌರಾಣಿಕ ನಾಟಕ ಕುರುಕ್ಷೇತ್ರ ಅರ್ಥಾತ್ ಧರ್ಮರಾಜ್ಯ ಸ್ಥಾಪನೆಯ ನಾಟಕವನ್ನು ಆಯೋಜಿಸಲಾಗಿದೆ ಎಂದು ಟಿ.ತಿಪ್ಪೇರುದ್ರಪ್ಪ ಬ್ಯಾಡರಹಳ್ಳಿ ಇವರು ಆಗಮಿಸಿದ್ದರು.
ಮಹತ್ವದ ಕುರುಕ್ಷೇತ್ರ ನಾಟಕದ ಶ್ರೀಕೃಷ್ಣ ಪಾತ್ರಧಾರಿಯಾಗಿ ಟಿ.ತಿಪ್ಪೇರುದ್ರಪ್ಪ ಬ್ಯಾಡರಹಳ್ಳಿ, ಧರ್ಮರಾಯನಾಗಿ ಹೂವಿನಹೊಳೆ ವೀರಣ್ಣ ಗೊಂಚಿಕಾರ್, ಭೀಮಸೇನನಾಗಿ ಸೋಮೇರಹಳ್ಳಿ ಉಮೇಶ್, ಅರ್ಜುನನಾಗಿ ಈರಪ್ಪ, ಅಭಿಮಾನ್ಯು ಅಂಬಲಗೆರೆ ಪಾಂಡು, ವಿದುರನಾಗಿ ಬ್ಯಾಡರಹಳ್ಳಿ ನಾಗರಾಜ್,
ದುರ್ಯೋಧನನಾಗಿ ಶಿವರಾಜ್ ಪಾಟೀಲ್, ದುಶ್ಯಾಸನನಾಗಿ ದೇವರಕೊಟ್ಟ ಗೌಡ, ಕರ್ಣನಾಗಿ ಹೊಸಳ್ಳಿ ಕೆಂಚಣ್ಣ ಪೂಜಾರ್, ಶಕುನಿಯಾಗಿ ಅಂಬಲಗೆರೆ ರಂಗಸ್ವಾಮಿ, ಸೈಂದವನಾಗಿ ಜೆಜಿಹಳ್ಳಿ ಗೋವಿಂದರಾಜ್ ಸೇರಿದಂತೆ ಪ್ರಮುಖ ಪಾತ್ರಧಾರಿಗಳಾಗಿ ಭಾಗವಹಿಸಿ ಕಲಾ ಪ್ರದರ್ಶನ, ಪ್ರದರ್ಶನಕ್ಕೆ ಆಗಮಿಸಿ ನಾಟಕವನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.