ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೊರ ದೇಶಗಳಿಂದ ನಿರಂತರ ಕಳ್ಳಸಾಗಣೆ, ಅಕ್ರಮ ಆಮದಿನಿಂದ ತತ್ತರಿಸಿರುವ ಅಡಿಕೆ ಬೆಳೆಗಾರರ ಹಿತ ಕಾಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಕೇಂದ್ರ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ.
ಜೊತೆಗೇ ಅಡಿಕೆ ಬೆಳೆಗೆ ಅನಿವಾರ್ಯವಾದ ಮೈಲುತುತ್ತಿನ ಮೇಲೆ 18% ಜಿಎಸ್ಟಿ ವಿಧಿಸಿ ಗಾಯದ ಮೇಲೆ ಬರೆ ಎಳೆದಿದೆ ಎಂದು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಅಡಿಕೆ ಆರೋಗ್ಯದಾಯಕ ಎಂದು ಸಾಬೀತಾಗಿದ್ದರೂ ವಿಶ್ವ ಆರೋಗ್ಯ ಸಂಸ್ಥೆಗೆ ಅದನ್ನು ಮನವರಿಕೆ ಮಾಡಿಕೊಡುವಲ್ಲಿಯೂ ಮೋದಿ ಸರ್ಕಾರ ವಿಫಲವಾಗಿದೆ. ಭಾರತೀಯರ ಆಧ್ಯಾತ್ಮಿಕ, ಸಾಂಸ್ಕತಿಕ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಅತ್ಯಂತ ಮಹತ್ವದ ಕೃಷಿ ಉತ್ಪನ್ನ ಅಡಿಕೆ ಬೆಳೆಗಾರರನ್ನು ಅಕ್ರಮ ಆಮದು,
ವಿಶ್ವ ಆರೋಗ್ಯ ಸಂಸ್ಥೆಯ ತೂಗುಗತ್ತಿಯಿಂದ ಪಾರು ಮಾಡುವಲ್ಲಿ ಕೇಂದ್ರದ ನಿರ್ಲಕ್ಷ್ಯದಿಂದ ಲಕ್ಷಾಂತರ ಬೆಳೆಗಾರರು ಆತಂಕದಲ್ಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.