ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರ ಪ್ರಾರಂಭಿಸಿರುವ ಡಾ. ಪುನೀತ್‌ರಾಜ್‌ಕುಮಾರ್‌ಹೃದಯಜ್ಯೋತಿ ಯೋಜನೆಯ ಅಡಿಯಲ್ಲಿ ಹೃದಯಾಘಾತಕ್ಕೆ ಒಳಗಾದವರಿಗೆ ನೀಡುತ್ತಿರುವ ‘ಟೆನೆಕ್ಟ್ ಪ್ಲಸ್‘ ಚುಚ್ಚುಮದ್ದು 348 ಹೃದ್ರೋಗಿಗಳ ಅಮೂಲ್ಯ ಜೀವಗಳನ್ನು ಉಳಿಸಿದೆ ಎಂದು ಕಾಂಗ್ರೆಸ್ ಹರ್ಷ ವ್ಯಕ್ತಪಡಿಸಿದೆ.
‘ಟೆನೆಕ್ಟ್‌ಪ್ಲಸ್ʼ ಚುಚ್ಚುಮದ್ದನ್ನು ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗಿದ್ದು, ಈ ಚುಚ್ಚುಮದ್ದಿಗೆ 30,000 ದರವಿದ್ದು, ಕಾಂಗ್ರೆಸ್ ಸರ್ಕಾರ ಉಚಿತವಾಗಿ ನೀಡುತ್ತಿದೆ.
ಈಗಾಗಲೇ 5,000ಕ್ಕೂ ಹೆಚ್ಚು ತೀವ್ರ ಹೃದಯರೋಗಿಗಳನ್ನು ಪತ್ತೆ ಹಚ್ಚಿ, 3,000ಕ್ಕೂ ಹೆಚ್ಚು ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ಒದಗಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.