ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬೆಂಗಳೂರು ರಾಜ್ಯಬಾಲ ಭವನ ಸೊಸೈಟಿಯಲ್ಲಿ ಜರುಗಿದ ರಾಜ್ಯ ಮಟ್ಟದ ಕಲಾಶ್ರೀ ಸ್ಪರ್ಧೆಯಲ್ಲಿ ಜಿಲ್ಲೆಯಿಂದ ಭಾಗವಹಿಸಿದ ಹರ್ಷಿಣಿ ಸಮಾಧನಕರ ಬಹುಮಾನ ಪಡೆದಿದ್ದಾರೆ. ನ.27 ರಿಂದ ನ.29 ವರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 3 ದಿನಗಳ ರಾಜ್ಯ ಮಟ್ಟದ ಕಲಾಶ್ರೀ ಸ್ಪರ್ದೆಗಳನ್ನು ರಾಜ್ಯ ಬಾಲ ಭವನ ಸೊಸೈಟಿಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್, ಬಾಲ ಭವನ ಸೊಸೈಟಿ ಅಧ್ಯಕ್ಷ ಬಿ.ಆರ್.ನಾಯ್ಡು, ನಿರ್ದೇಶಕ ಸಿದ್ದೇಶ್ವರ, ಕಾರ್ಯದರ್ಶಿ ನಿಶ್ಚಲ್ ಉಪಸ್ಥಿತರಿದ್ದರು. ಚಿತ್ರದುರ್ಗ ಜಿಲ್ಲೆಯಿಂದ ವಿದ್ಯಾರ್ಥಿಗಳಾದ ಸಿಂಧು ,ಹರ್ಷಿಣಿ ಶೋಭಾ, ನಿತ್ಯಶ್ರೀ, ಸೂರ್ಯ, ಕಾರ್ತಿಕ್ ಪೂಜಾರ್ ಭಾಗವಹಿಸಿದ್ದರು.
ಇವರೊಂದಿಗೆ ಬೆಂಗಾವಲು ಸಿಬ್ಬಂದಿಯಾಗಿ ಕಾರ್ಯಕ್ರಮ ಸಂಯೋಜಕ ಕುಮಾರ್, ಕೆ.ಪವಿತ್ರ, ಮನು ತೆರಳಿದ್ದರು ಎಂದು ಉಪನಿರ್ದೇಶಕ ಭಾರತಿ ಆರ್ ಬಣಕಾರ್ ತಿಳಿಸಿದ್ದಾರೆ.