ಚಂದ್ರವಳ್ಳಿ ನ್ಯೂಸ್, ಕೋಲಾರ:
ನವೆಂಬರ್ ೧೨ ರಂದು ನಡೆದಂತಹ ಮಹಿಳಾ ಹಾಗೂ ಮಕ್ಕಳ ಇಲಾಖೆ ಇಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಲಾ ಸ್ಪರ್ಧೆಯಲ್ಲಿ ಐಸಿರಿ ಎಸ್ ಭಾಗವಹಿಸಿ ಜಿಲ್ಲೆಗೆ ಎರಡನೇಯವರಾಗಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತಾರೆ.
ಹಾಗೆ ೨೮ ನವೆಂಬರ್ ರಂದು ನಡೆದಂತ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಐಸಿರಿ ಎಸ್ ಎಲ್ಲ ಜಿಲ್ಲೆಗಳಿಂದ ಬಂದಂತಹ ಎಲ್ಲ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಿ ರಾಜ್ಯಕ್ಕೆ ಮೂರನೇ ಪ್ರಶಸ್ತಿಯನ್ನೂ ಮುಡಿಯೇರಿಸಿರುತ್ತಾರೆ.
ನವೆಂಬರ್ ೨೯ ರಂದು ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಸಾರಥ್ಯದಲ್ಲಿ ನಡೆದಂತಹ ಕಾರ್ಯಕ್ರಮದಲ್ಲಿ ಐಸಿರಿ ಎಸ್ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ರವರು ಹಾಜರಿದ್ದರು.
ಕಲಾವಿದೆ ಐಸಿರಿ ಎಸ್ ಅವರಿಗೆ ಈ ಸಂತಸ ಸುದ್ದಿ ಇಂದ ಚಿಕ್ಕತಿರುಪತಿ ಗ್ರಾಮಸ್ಥರು ಹಾಗೂ ತಂದೆ ಸಂತೋಷ್, ತಾಯಿ ದೀಪಿಕಾ, ಅಜ್ಜ ದಕ್ಷಿಣಮೂರ್ತಿ ಹಾಗೂ ಗುರುಗಳಾದ ಪ್ರೀತಿ ಗೋಪಿನಾಥ್ ಶುಭ ಕೋರಿದ್ದಾರೆ.