ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“100 ಕೋಟಿ ಹಿಂದುಗಳನ್ನ 15 ನಿಮಿಷದಲ್ಲಿ ಕೊಲ್ಲುತ್ತೇವೆ” ಅಂತ ಓವೈಸಿ ಹೇಳಿದಾಗ ತುಟಿಕ್ ಪಿಟಿಕ್ ಎಂದಿಲ್ಲ!!! ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
“ಪಾಕಿಸ್ತಾನ್ ಜಿಂದಾಬಾದ್” ಎಂದವನನ್ನು ಪ್ರಶ್ನಿಸಲು ನಿಮಗೆ ಬಾಯಿ ಬರಲಿಲ್ಲ!!! “ಓಟ್ ಜಿಹಾದಿ”ಗೆ ಕರೆಕೊಟ್ಟವನನ್ನು ಹೆಲಿಕಾಪ್ಟರ್ನಲ್ಲಿ ಕೂರಿಸಿಕೊಂಡು ಓಡಾಡಿಸಿದಿರಿ!!! ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಿ.ಟಿ ರವಿ ಹರಿಹಾಯ್ದಿದ್ದಾರೆ.
“ನಿಮಗೆ ಕಾನೂನು ಪಾಸ್ ಮಾಡಲು ಸಂಸತ್ತಿದ್ದರೆ ನಮಗೆ ರಸ್ತೆಯಿದೆ. ನಾವು ರಸ್ತೆಯಲ್ಲಿ ಉತ್ತರ ನೀಡುತ್ತೇವೆ” ಎಂದ ಮುಲ್ಲಾನ ವಿರುದ್ಧ ಉಸಿರೇ ಎತ್ತಲಿಲ್ಲ!!!! ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಕೇಸು ದಾಖಲಿಸಿದ್ದೀರಿ. ನಾಚಿಗೆಯಾಗಬೇಕು ನಿಮಗೆ ಎಂದು ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ನಾಯಕರನ್ನು ರವಿ ತರಾಟೆ ತೆಗೆದುಕೊಂಡಿದ್ದಾರೆ.