ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇತ್ತೀಚಿಗೆ ಕೆಲವು ಸಮಾಜ ಘಾತುಕ, ವಿಚ್ಛಿದ್ರಕಾರಿ ಮನಸ್ಥಿತಿಯ ವ್ಯಕ್ತಿಗಳು ನಾನು ಹೇಳದೆ ಇರುವ ಮಾತುಗಳನ್ನು, ನಾನು ಕೊಡದೆ ಇರುವ ಹೇಳಿಕೆಗಳನ್ನು, ನನ್ನ ಹೇಳಿಕೆ/ಪತ್ರಿಕಾ ಪ್ರಕಟಣೆ (Fake News) ಎಂದು ತೋರಿಸುವ ರೀತಿಯಲ್ಲಿ ಫೋಟೋ ಎಡಿಟ್ ಮಾಡಿ, ನನ್ನ ವಿರುದ್ಧ ಅಪಪ್ರಚಾರ ಮಾಡಿರುವುದು, ಕೆಲ ಜಾತಿ ಮತ್ತು ಸಮಾಜವನ್ನು ನನ್ನ ವಿರುದ್ಧ ಎತ್ತಿಕಟ್ಟಲು ಪ್ರಯತ್ನ ಪಡುತ್ತಿರುವುದು ಸ್ಪಷ್ಟವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆರಂಭವಾದ ಈ ಕೆಟ್ಟ ಚಾಳಿ ನಿಲ್ಲಲೇ ಬೇಕು ಎಂದು ಬಿಜೆಪಿ ನಾಯಕ, ವಿಪ ಸದಸ್ಯ ಸಿ.ಟಿ. ರವಿ ತಿಳಿಸಿದ್ದಾರೆ.
ಇಂಥಹ ಸುಳ್ಳು ಸುದ್ದಿ ಹರಡುವ, ಅಪಪ್ರಚಾರ ಮಾಡುವ, ಸಮಾಜದಲ್ಲಿ ಶಾಂತಿಯನ್ನು ಕದಡುವ ಚಟುವಟಿಕೆಗಳನ್ನು ಇಂಥಹ ವ್ಯಕ್ತಿಗಳು ತಕ್ಷಣವೇ ನಿಲ್ಲಿಸಬೇಕು.
ಈ ರೀತಿಯ ಕೃತ್ಯಗಳು ಕಂಡುಬಂದರೆ ಅಂಥವರ ವಿರುದ್ಧ ಕಾನೂನು ಪ್ರಕಾರ ದೂರು ದಾಖಲಿಸಲಾಗುವುದು ಎಂದು ಸಿ.ಟಿ ರವಿ ಎಚ್ಚರಿಸಿದ್ದಾರೆ.