ಆಟೋ ಚಾಲಕರು ಸಂಚಾರಿ ನಿಯಮ ಉಲ್ಲಂಘಿಸಿದರೆ ಶಿಸ್ತುಕ್ರಮ: ಪಿಎಸ್‌ಐ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದಲ್ಲಿ ಸಾವಿರಕ್ಕೂ ಹೆಚ್ಚು ಆಟೋರಿಕ್ಷಾ ಸಂಚರಿಸುತ್ತಿದ್ದು
, ಸಂಚಾರಿ ನಿಯಮಗಳನ್ನು ಪಾಲಿಸುವಲ್ಲಿ ಆಟೋಚಾಲಕರು ವಿಫಲರಾಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಅಪಘಾತಗಳಿಗೆ ಚಾಲಕರ ಸಂಚಾರಿ ನಿಯಮ ಉಲ್ಲಂಘನೆ ಕಾರಣವಾಗುತ್ತದೆ ಎಂದು ತಿಳಿದು ಬಂದಿದೆ. ಪ್ರತಿಯೊಬ್ಬ ಆಟೋಚಾಲಕ ಸಂಚಾರಿ ನಿಯಮ ಕಡ್ಡಾಯವಾಗಿ ಪಾಲಿಸಬೇಕೆಂದು ಪಿಎಸ್‌ಐ ಧರೆಪ್ಪ ಬಾಳಪ್ಪ ದೊಡ್ಡಮನಿ ತಿಳಿಸಿದರು.

ಅವರು, ಭಾನುವಾರ ಪೊಲೀಸ್ ಠಾಣಾ ಆವರಣದಲ್ಲಿ ಆಟೋರಿಕ್ಷಾ ಚಾಲಕರಿಗೆ ಸಂಚಾರಿ ನಿಯಮ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗರದ ನಾಲ್ಕು ರಸ್ತೆಗಳಲ್ಲಿ ಆಟೋರಿಕ್ಷಾಗಳು ಎಂದಿನಂತೆ ಸಂಚಾರ ಮಾಡುತ್ತಿದ್ದು, ಸಂಚಾರ ನಿಯಮಗಳನ್ನು ಮಾತ್ರ ಪಾಲನೆ ಮಾಡುತ್ತಿಲ್ಲ.

ಖಾಸಗಿ ಬಸ್ ನಿಲ್ಧಾಣ ಸೇರಿದಂತೆ ಎಲ್ಲೆಡೆ ಆಟೋರಿಕ್ಷಾ ಚಾಲಕರು ಬಸ್ ಬಂದಕೂಡಲೇ ಪ್ರಯಾಣಿಕರು ಇಳಿಯದಂತೆ ಸುತ್ತಲು ಆಟೋರಿಕ್ಷಾಗಳನ್ನು ನಿಲ್ಲಿಸಿ ತೊಂದರೆ ಕೊಡುತ್ತೀರ, ಬಹುತೇಕ ಆಟೋಚಾಲಕರಿಗೆ ಪರವಾನಿಗೆ ಇಲ್ಲದಿದ್ದರೂ ಚಾಲನೆ ಮಾಡುತ್ತಿದ್ದೀರ, ಅಪ್ರಾಪ್ತ ಬಾಲಕರೂ ಸಹ ಆಟೋರಿಕ್ಷಾಗಳನ್ನು ಓಡಿಸುವುದು ಪೊಲೀಸ್ ಇಲಾಖೆ ಗಮನಕ್ಕೆ ತಂದಿದೆ.

ಚಾಲಕರು ಸಂಚಾರಿ ನಿಯಮ ಮತ್ತು ಪೊಲೀಸ್ ಇಲಾಖೆ ಮಾರ್ಗದರ್ಶನದಂತೆ ನಡೆಯಬೇಕು. ಇಲ್ಲವಾದಲ್ಲಿ ಇಲಾಖೆ ಕಾನೂನು ಕ್ರಮಕ್ಕೆ ಮುಂದಾಗುತ್ತದೆ ಎಂದು ಎಚ್ಚರಿಸಿದರು.

ಆಟೋಚಾಲಕರಾದ ವೀರೇಶ್, ತಿಪ್ಪೇಸ್ವಾಮಿ, ಮಂಜುನಾಥ, ಸುದೀರ್, ಮಂಜಣ್ಣ, ಓಬಣ್ಣ ಮುಂತಾದವರು ಭಾಗವಹಿಸಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";