ಚಂದ್ರವಳ್ಳಿ ನ್ಯೂಸ್, ತುಮಕೂರು:
ನಗರದ ೨೬ನೇ ವಾರ್ಡ್ ನ ಗ್ರಾಂಡ್ ಸೆವೆನ್ ಪಾರ್ಟಿ ಹಾಲ್ ಮಾಲೀಕ ವಿನಯ್ ಕುಮಾರ್ ಅವರಿಗೆ ನವೆಂಬರ್ ೨೩ರಂದು ಗೋವಾದಲ್ಲಿ ನಡೆದ ಸಿಸಿ ಯೂನಿವರ್ಸಿಟಿ ಘಟಿಕೋತ್ಸವದಲ್ಲಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಪದವಿಗೆ ಹಾನರ್ಸ್ ಡಾಕ್ಟರೇಟ್ ಪದವಿ ನೀಡಿ ವಿಶ್ವ ವಿದ್ಯಾನಿಲಯ ಗೌರವಿಸಿದೆ.
ಡಾ: ವಿನಯ್ ಕುಮಾರ್ ಮಾತನಾಡಿ, ಯುವಜನರಿಗೆ ವಿದ್ಯಾಭ್ಯಾಸ ಹಾಗೂ ಪದವಿಯ ಮಹತ್ವವನ್ನು ತಿಳಿಸಿದರು. ಶಿಕ್ಷಣವು ಅತ್ಯುತ್ತಮ ಸ್ನೇಹಿತ. ವಿದ್ಯಾವಂತ ವ್ಯಕ್ತಿಯನ್ನು ಎಲ್ಲೆಡೆ ಗೌರವಿಸಲಾಗುತ್ತದೆ.
“ಶಿಕ್ಷಣವು ಮನು?ನನ್ನು ಯಾವ ದಿಕ್ಕಿನಲ್ಲಿ ಪ್ರಾರಂಭಿಸುತ್ತದೆಯೋ ಅವನ ಭವಿ?ದ ಜೀವನವನ್ನು ನಿರ್ಧರಿಸುತ್ತದೆ.” ವಿದ್ಯಾಭ್ಯಾಸದೊಂದಿಗೆ ವ್ಯವಹಾರ ಜ್ಞಾನಕ್ಕೂ ಪ್ರಾಮುಖ್ಯತೆ ಕೊಡಬೇಕು. ಪೋ?ಕರಿಗೆ ಹೊರೆಯಾಗದಂತೆ ಸ್ವಾವಲಂಬಿ ಜೀವನ ನಡೆಸುತ್ತಾ ಎರಡನ್ನು ನಿಭಾಯಿಸಬೇಕು ಎಂದು ಯುವಜನರಿಗೆ ಕರೆ ನೀಡಿದರು.
ಡಾಕ್ಟರೇಟ್ ಅನ್ನು ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ರವರು ನೀಡಿ ಶ್ಲಾಘಿಸಿದರು. ಈ ಸಮಾರಂಭದಲ್ಲಿ ಬಾಲಿವುಡ್ ನಟ ಶಹಭಾ? ಖಾನ್, ಡಾ. ನಟರಾಜ್, ಮತ್ತಿತರರು ಗಣ್ಯರು ಉಪಸ್ಥಿತರಿದ್ದರು.