ನಾಡು ನುಡಿ ಜಲ ವಿಚಾರದ ಹೊರಾಟಕ್ಕೆ ಸದಾ ಸಿದ್ದ-ಬಿ ಶಿವ ಶಂಕರ್

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೆ ಆರ್ ಎಸ್ ಪಕ್ಷವು ಕೇವಲ ಭ್ರಷ್ಟಾಚಾರ ನಿಯಂತ್ರಣಕ್ಕೆ ಮಾತ್ರ ಸೀಮಿತವಲ್ಲ ನಾಡು ನುಡಿ ಜಲ ವಿಚಾರಕ್ಕು ನಮ್ಮ ನಾಯಕರಾದ ರವಿ ಕೃಷ್ಣಾ ರೆಡ್ಡಿರವರ ಮಾರ್ಗದರ್ಶನದಲ್ಲಿ ಹೋರಾಟ ಮಾಡುತ್ತಲೆ ಬಂದಿದ್ದು ಸಾರ್ವಜನಿಕ ಸೇವೆಗಾಗಿ ನೂತನ ತಾಲ್ಲೂಕು ಘಟಕದ ಕಚೇರಿ ಸ್ಥಾಪಿಸಲಾಗಿದೆ ಎಂದು ಕರ್ನಾಟಕ ರಾಷ್ಟ್ರಸಮಿತಿಯ ಜಿಲ್ಲಾದ್ಯಕ್ಷ ಬಿ.ಶಿವಶಂಕರ್ ತಿಳಿಸಿದರು.

ಅವರು ದೊಡ್ಡಬಳ್ಳಾಪುರದಲ್ಲಿ, ಪಕ್ಷದ ನೂತನ ಕಛೇರಿ ಉದ್ಘಾಟಿಸಿ ಮಾತನಾಡಿ ಭ್ರಷ್ಟಾಚಾರದ ವಿರುದ್ದ ನಮ್ಮ ಹೋರಾಟ ನಿರಂತರವಾಗಿರುತ್ತದೆ  ದೊಡ್ಡಬಳ್ಳಾಪುರ ತಾಲ್ಲೊಕು ಕೆ.ಆರ್.ಎಸ್ ಪಕ್ಷದ ಸೈನಿಕರ ಸಹಕಾರದಿಂದ ಇಂದು ತಾಲ್ಲೂಕು ಘಟಕದ ಕಛೇರಿ ಪ್ರಾರಂಬಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು‌.

ಕರ್ನಾಟಕ ರಾಷ್ರ ಸಮಿತಿಯ ರಾಜ್ಯ ಘಟಕದ ಪಕ್ಷ ಸಂಘಟನೆಗೆ ಶಕ್ತಿ ತುಂಬಲು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆ.ಆರ್.ಎಸ್ ಪಕ್ಷದಿಂದ 50,000 ಧನ ಸಹಾಯ ಮಾಡಲಾಗುತಿದ್ದು ತಾಲ್ಲೋಕಿನ ಸೇನಾನಿಗಳು ತಮ್ಮ ಕೈಲಾದ ದೇಣಿಗೆಯನ್ನು ಸಂಗ್ರಹಿಸಿ ಕೊಡಲು ಮನವಿ ಮಾಡಿದರು‌‌‌.

ತಾಲ್ಲೂಕಿನ ಖಾಸಗಿ ಶಾಲೆಗಳಲ್ಲಿ ಕನ್ನಡ ಕನ್ನಡ ಬಳಕೆಯ ಬಗ್ಗೆ ಸತ್ಯ ತಿಳಿಯಲು ಶೀಘ್ರದಲ್ಲಿ ರಿಯಾಲಿಟಿ ಚೆಕ್ ಮಾಡಲಿದ್ದೇವೆ ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಬಿ ಶಿವಶಂಕರ್ , ಜಿಲ್ಲಾ ಕಾರ್ಯದರ್ಶಿ ವೇಣು , ಜಿಲ್ಲಾ ಸಮಿತಿಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಮಾರುತಿ, ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷೆ ಲೀಲಾ ರಾಮ್, ತಾಲೂಕು ಘಟಕದ ಉಪಾಧ್ಯಕ್ಷ ಶ್ರೀನಿವಾಸ್ ಡಿ ಎಂ, ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷ ಫಾರೂಕ್,

ತಾಲೂಕು ಕಾರ್ಯಾಧ್ಯಕ್ಷ ತಾಜೂದ್ದೀನ್, ಸಂಘಟನಾ ಕಾರ್ಯದರ್ಶಿ ಬಾಲು, ಸಹ ಕಾರ್ಯದರ್ಶಿ ಚೌಡಪ್ಪ, ಮಂಜುನಾಥ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ರಂಜಿತಾ, ತಾಲ್ಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ಸರಸ್ವತಿ, ಕಾರ್ಯದರ್ಶಿಗಳಾದ ಮೌಲಾ ಜಾನ್, ನಂಜಪ್ಪ,ನಾರಾಯಣ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";