ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕು ತೂಬಗೆರೆ ಹೋಬಳಿ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಕಾತಿ೯ಕ ಮಾಸದ ಪ್ರಯುಕ್ತ ದೀಪೋತ್ಸವವನ್ನು ಏಪ೯ಡಿಸಲಗಿತ್ತು. ದೀಪೋತ್ಸವದ ಕಾರಣ ದೇವರಿಗೆ ವಿಶೇಷ ಅಲಂಕಾರ, ದೇವರ ಉತ್ಸವ ನಡೆಸಲಾಯಿತು.
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಎಂ.ನಾರಾಯಣಸ್ವಾಮಿ ಪ್ರಧಾನ ಅಚ೯ಕರಾದ ಆರ್ ಸುಬ್ರಹ್ಮಣ್ಯ, ದೇವಾಲಯದ ಸಿಬ್ಬಂದಿಗಳು ಸಾರ್ವಜನಿಕರು ಗ್ರಾಮಸ್ಥರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.