ವಕ್ಫ್ ಮಂಡಳಿ ರದ್ದುಗೊಳಿಸಿದ ಆಂಧ್ರದ ಎನ್‌ಡಿಎ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೈತರ ಜಮೀನಿಗೆ ಕನ್ನ ಹಾಕುತ್ತಿದ್ದ ವೈಎಸ್‌ಆರ್ ಕಾಂಗ್ರೆಸ್ ಆಡಳಿತದ ವಕ್ಫ್ ಮಂಡಳಿಯನ್ನು ರದ್ದುಗೊಳಿಸಿದ ಆಂಧ್ರ ಪ್ರದೇಶದ ಎನ್‌ಡಿಎ ಸರ್ಕಾರ ಎಂದು ಬಿಜೆಪಿ ತಿಳಿಸಿದೆ.

ನಾಡಿನ ರೈತರ ಹಿತವನ್ನು ಕಾಪಾಡಲು ಆಂಧ್ರಪ್ರದೇಶದ ಎನ್.ಚಂದ್ರಬಾಬು ನಾಯ್ಡು ನೇತೃತ್ವದ ಎನ್‌ಡಿಎ ಸರ್ಕಾರ ಮಾದರಿ ಹೆಜ್ಜೆಯನ್ನಿಟ್ಟಿದೆ. ಈ ರೀತಿ ನಾಡಿನ ರೈತರ, ಜನಸಾಮಾನ್ಯರ ಹಿತ ಕಾಪಾಡಲು ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವೇ? ಎಂದು ಬಿಜೆಪಿ ಪ್ರಶ್ನಿಸಿದೆ.

- Advertisement - 

ವಕ್ಫ್ ಮಂಡಳಿಯ ಭೂ ಕಬಳಿಕೆಯ ದಾಹವನ್ನು ರಾಜ್ಯದಲ್ಲಿಯೂ ನಿಲ್ಲಿಸಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಆಂಧ್ರಪ್ರದೇಶ ಸರ್ಕಾರ ವಕ್ಫ್ ಮಂಡಳಿಯನ್ನು ವಿಸರ್ಜಿಸಿದಂತೆ ರಾಜ್ಯದಲ್ಲೂ ವಕ್ಫ್ ಮಂಡಳಿ ವಜಾಗೊಳಿಸಿ, ಗೆಜೆಟ್ ನೋಟಿಫಿಕೇಶನ್ ರದ್ದುಗೊಳಿಸಬೇಕು.

ಆ ಮೂಲಕ ಬಾಬಾ ಸಾಹೇಬರ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ರಾಜ್ಯ ಕಾಂಗ್ರೆಸ್‌ಸರ್ಕಾರ ನಡೆದುಕೊಳ್ಳಬೇಕು ಎಂದು ಬಿಜೆಪಿ ತಾಕೀತು ಮಾಡಿದೆ.

- Advertisement - 

 

 

Share This Article
error: Content is protected !!
";