ಜಿಲ್ಲಾ ಸಚಿವ ಸುಧಾಕರ್ ಆದೇಶಕ್ಕೂ ಕಿಮ್ಮತ್ತಿಲ್ಲ, ನಾವು ಫೇಲ್ ಆದರೆ ನೀವೇ ಕಾರಣ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಳೆದ ನಾಲ್ಕು ತಿಂಗಳ ಹಿಂದೆ ಹಿರಿಯೂರು ತಾಲೂಕಿನ ಯಲ್ಲದಕೆರೆ ಗ್ರಾಮ ಪಂಚಾಯಿತಿಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದಾಗ ಪತ್ರಿಕೆಗಳಲ್ಲಿ ಬಂದಿದ್ದ ಪ್ರತಿಭಟನೆ ಸುದ್ದಿ ನೋಡಿದ ಸಚಿವರು ಕೂಡಲೇ ಆ ಭಾಗಕ್ಕೆ ಬಸ್ಸುಗಳನ್ನ ಬಿಡಿ ಎಂದು ಆದೇಶಿಸಿದ್ದರು.

ಸಾರಿಗೆ ಇಲಾಖೆಯು ಯಾವುದೇ ಬಸ್ಸುಗಳನ್ನು ಬಿಡದೆ ಸಚಿವರ ಆದೇಶವನ್ನು ಧಿಕ್ಕರಿಸಿದ್ದು ಈ ವಿಚಾರವಾಗಿ ಯಲ್ಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳು ನಾಲ್ಕು ತಿಂಗಳಿಂದ ನೋಡುತ್ತಲೇ ಬಂದಿದ್ದರು.

ಆದರು ಬಸ್ಸುಗಳು ಬರಲೇ ಇಲ್ಲ. ತಾಳ್ಮೆಯ ಕಟ್ಟೆಯೊಡದಿದ್ದು ವಿದ್ಯಾರ್ಥಿಗಳೆಲ್ಲರೂ ಜಿಟಿ ಜಿಟಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಯಲ್ಲದಕೆರೆಯಲ್ಲಿ ರಸ್ತೆ ತಡೆ ಚಳುವಳಿ ನಡೆಸಿದರು.

ಈ ಸಂದರ್ಭದಲ್ಲಿ ಬಂದಂತಹ ಪೊಲೀಸ್ ನವರು ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡಿ ನಿಮ್ಮ ಮೇಲೆ ಕೇಸ್ ಹಾಕುತ್ತೇನೆ ಎಂದು ಎದರಿಸಿದರು. ಆದರೆ ವಿದ್ಯಾರ್ಥಿಗಳು ನೀವು ಕೇಸ್ ಹಾಕಿ ಪರವಾಗಿಲ್ಲ ನಮಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗದ ರೀತಿಯಲ್ಲಿ ಬಸ್ಸುಗಳನ್ನು ಬಿಡಿ ಎಂದು ಅವಲತ್ತುಕೊಂಡರು. ಈ ಸಂದರ್ಭದಲ್ಲಿ ಬಂದಂತಹ ಸಾರಿಗೆ ಇಲಾಖೆಯವರು ವಾರದೊಳಗೆ ಬಸ್ಸನ್ನ ಬಿಡುತ್ತೇವೆ ಎಂದು ಭರವಸೆ ನೀಡಿದರು.

ವಿದ್ಯಾರ್ಥಿಗಳು ಇನ್ನೂ ವಾರದವರೆಗೂ ನಾವು ಹಿರಿಯೂರಿನವರೆಗೂ ನಡೆದುಕೊಂಡು ಬರಬೇಕೇ ಅಥವಾ ಶಾಲಾ-ಕಾಲೇಜುಗಳನ್ನು ಹಾಗೂ ಪಾಠ ಪ್ರವಚನದಿಂದ ವಂಚಿತರಾಗಬೇಕೆಂದು ಪ್ರಶ್ನಿಸಿದರು ಕೊನೆಗೆ ವಿದ್ಯಾರ್ಥಿಗಳು ನಾವು ಇನ್ನು ವಾರದವರೆಗೂ ಮನೆಯಲ್ಲಿ ಇರುತ್ತೇವೆ. ನೀವು ಬಸ್ ಬಿಟ್ಟ ತಕ್ಷಣ ಶಾಲೆಗೆ ಹೋಗುತ್ತೇವೆ ಎಂದು ಧರಣಿ ವಾಪಸ್ ತೆಗೆದುಕೊಂಡರು.

ಪರೀಕ್ಷೆಯಲ್ಲಿ ಫೇಲ್ ಆದರೆ ನೀವೇ ನೇರ ಹೊಣೆ-
ಯಲ್ಲದಕೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆ ಬಸ್ ಗಳನ್ನು 2 ಗಂಟೆಗಳಿಗೂ ಹೆಚ್ಚು ಕಾಲ ತಡೆದು ಧರಣಿ ಸತ್ಯಾಗ್ರಹ ಮಾಡಿದರು.

ಯಲ್ಲದಕೆರೆ ಸುತ್ತ ಮುತ್ತಲಿನ ೨೦ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕೊಂಡಿಯಾಗಿದ್ದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹಿರಿಯೂರು, ಚಿತ್ರದುರ್ಗ ನಗರಗಳಿಗೆ ದಿನನಿತ್ಯ ಹೋಗಬೇಕಾದ ಅನಿವಾರ್ಯತೆ ಇದ್ದು ಬೆಳಿಗ್ಗೆ ೦೮ ಗಂಟೆಯಿಂದ ೧೧ ಗಂಟೆಯವರೆಗೆ ಯಾವುದೆ KSRTC ಬಸ್ ಗಳಿಲ್ಲ, ಮೈಸೂರು ಮಾರ್ಗದ ೧-೨ ಬಸ್ ಗಳು ಇದ್ದರೂ ಸಹ ವಿದ್ಯಾರ್ಥಿಗಳನ್ನು ನೋಡಿ ನಿಲ್ಲಿಸುವುದಿಲ್ಲ.

ಇದರಿಂದಾಗಿ ಕಳೆದ ೨ ವರ್ಷಗಳಿಂದ ಕಾಲೇಜಿಗೆ ಸರಿಯಾದ ಸಮಯಕ್ಕೆ ಹೋಗಲಾಗದೆ ಮನೆಗೂ ಹೋಗಲಾಗದೆ ಪರಿತಪಿಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ದೂರಿದರು.

 ಸದರಿ ಸಮಸ್ಯೆ ಬಗ್ಗೆ ಹಲವು ಬಾರಿ KSRTC ಅಧಿಕಾರಿಗಳಿಗೆ ಲಿಖಿತ ಮನವಿ ನೀಡಿದ್ದರೂ ಸಹ ಸ್ಪಂದಿಸಿರುವುದಿಲ್ಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ರವರಿಗೆ ನಾಲ್ಕು ತಿಂಗಳ ಹಿಂದೆ ಮನವಿ ಕೊಟ್ಟ ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಬಸ್ ಬಿಡಲು ಆದೇಶ ಮಾಡಿದ್ದರೂ ಸಹ ಸಚಿವರ ಆದೇಶಕ್ಕೆ ಮನ್ನಣೆ ನೀಡಲಿಲ್ಲ  ಎಂದು ವಿದ್ಯಾರ್ಥಿಗಳು ಬೇಸರಪಟ್ಟರು.

ಈ ಭಾಗದಲ್ಲಿ ದಲಿತರು, ಬಡವರೆ ಹೆಚ್ಚು ವಾಸಿಸುವ ಕಲ್ಲುವಳ್ಳಿ ಪ್ರದೇಶದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿದಿದ್ದು ಪರೀಕ್ಷೆಯಲ್ಲಿ ಫೇಲ್ ಆದರೆ ಅಧಿಕಾರಿಗಳೆ ನೇರ ಹೊಣೆ ಎಂದು ವಿದ್ಯಾರ್ಥಿಗಳು ಎಚ್ಚರಿಸಿ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

- Advertisement -  - Advertisement -  - Advertisement - 
Share This Article
error: Content is protected !!
";