ಸರ್ಕಾರಿ ನೌಕರರ ಹಿತ ಕಾಯುವುದೇ ಮೂಲ ಉದ್ದೇಶ-ಸಿ. ಎಸ್ ಷಡಕ್ಷರಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಪ್ರತಿಯೊಬ್ಬ ಸರ್ಕಾರಿ ನೌಕರರ ಹಿತ ಕಾಯುವುದೇ ಸರ್ಕಾರಿ ನೌಕರರ ಸಂಘದ
  ಮೂಲ ಉದ್ದೇಶವಾಗಿದೆ  ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಕ್ಷರಿ ಹೇಳಿದರು.

  ಅವರು  ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆದ 2024 – 2029ರ ಅವಧಿಗೆ ಆಯ್ಕೆಯಾದ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ  ಪದಾಧಿಕಾರಿಗಳ ಪದಗ್ರಹಣ  ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಪಾರದರ್ಶಕವಾಗಿ ಕೆಲಸ ನಿರ್ವಹಿಸಬೇಕು ಆಗ ಮಾತ್ರ  ನಾವು ಸರ್ಕಾರದಿಂದ ಪಡೆಯುವ ಎಲ್ಲ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ದೊಡ್ಡಬಳ್ಳಾಪುರ ತಾಲೂಕು  ನೌಕರರ ಸಂಘದ ಭವನ ಯಾವುದೇ ಜಿಲ್ಲಾ ಸಂಘದ ನೌಕರರ ಭವನ ಕ್ಕಿಂತ ಕಡಿಮೆ ಇಲ್ಲ, ತಾಲೂಕ್ ಅಧ್ಯಕ್ಷರ ಬೇಡಿಕೆಯಂತೆ ಒಂದು ವರ್ಷದ ಒಳಗೆ ಸುಮಾರು ಒಂದು ಕೋಟಿ ಅನುದಾನ ಕೊಡಿಸಿ ಭವನದ ಸಂಪೂರ್ಣ ಕೆಲಸವನ್ನು ಮುಗಿಸುತ್ತೇನೆ  ಎಂದರು.    

  ನೂತನವಾಗಿ ತಾಲ್ಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಎಂ ಎಸ್ ರಾಜಶೇಖರ್ ಮಾತನಾಡಿ ನಮ್ಮ ತಾಲೂಕ್ ಸಂಘವನ್ನು ಮಾದರಿ ತಾಲ್ಲುಕು ಸಂಘವನ್ನಾಗಿ ಮಾಡಲು ಕಾಯ ವಾಚಾ ಮನ ಶ್ರಮಿಸುತ್ತೇನೆ.ನೌಕರರ ಏನೇ ಸಮಸ್ಯೆಗಳಿದ್ದರೂ ರಾಜ್ಯ ಸಂಘದ  ಸಹಕಾರದೊಂದಿಗೆ ಬಗೆಹರಿಸುತ್ತೇನೆ  ಎಂದ ಅವರು ಸರ್ಕಾರಿ ನೌಕರರ ಭವನದ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಇದನ್ನು ಪೂರ್ಣ ಮುಗಿಸಲು ರಾಜ್ಯಾಧ್ಯಕ್ಷರ ಸಹಕಾರದೊಂದಿಗೆ ಒಂದು ಕೋಟಿ ಅನುದಾನವನ್ನು ತಂದು ನೌಕರ ಭವನದ ಕೆಲಸವನ್ನು ಸಂಪೂರ್ಣ ಗೊಳಿಸುತ್ತೇನೆ ಎಂದರು.

ಮುಕೇಶ್ ಬಾಬು ಕಾರ್ಯಕ್ರಮದ ಪ್ರಸ್ತಾವಿಕವಾಗಿ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ  ಕೇಂದ್ರ ಸಂಘದ ಹಿರಿಯ ಉಪಾಧ್ಯಕ್ಷರಾದ  ಬಸವರಾಜ್, ಕಾರ್ಯದರ್ಶಿ ನೆಲಗುಂದ್ರಿ ಸದಾನಂದಪ್ಪ, ಗಿರಿ ಗೌಡ, ಹರ್ಷ

ಚೇತನ್ ಪಾಂಡು, ತಾಲೂಕು ಗೌರವಾಧ್ಯಕ್ಷ  ರಾಮಾಂಜಿನಪ್ಪ , ನಿಕಟ ಪೂರ್ವ ಅಧ್ಯಕ್ಷ ರಾಮಕೃಷ್ಣಯ್ಯ ರಾಜ್ಯ ಪರಿಷತ್ ಸದಸ್ಯ ಹರೀಶ್, ತಾಲೂಕ್ ಕಾರ್ಯದರ್ಶಿ ಧನಂಜಯ,ಹಾಗೂ ಎಲ್ಲಾ ವೃಂದ ಸಂಘದ ಅಧ್ಯಕ್ಷರು, ನಿರ್ದೇಶಕರು ಹಾಜರಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";