ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನೆಡೆಯುತ್ತಿರುವ ಹಲ್ಲೆ ಹಾಗು ಆಕ್ರಮಣಗಳನ್ನು ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿಯಿಂದ ನಗರದ ತಾಲ್ಲೂಕು ಕಛೇರಿ ವೃತ್ತದಲ್ಲಿ ಪ್ರತಿಭಟನೆ ನೆಡೆಸಲಾಯಿತು.
ನಗರದ ಹಳೆ ಬಸ್ ನಿಲ್ದಾಣದಿಂದ ತಾಲ್ಲೂಕು ಕಛೇರಿಯ ವರೆವಿಗೂ ಶಾಸಕ ಧೀರಜ್ ಮುನಿರಾಜ ನೇತೃತ್ವದಲ್ಲಿ ಪ್ರತಿಭಟನೆ ಮೆರವಣೆಗೆ ನೆಡೆಸಲಾಯಿತು. ತಾಲ್ಲೂಕು ಅಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ತಾಲ್ಲೂಕು ಕಛೇರಿ ವೃತ್ತದಲ್ಲಿ ಪ್ರತಿಭಟನೆ ಸಭೆಯಲ್ಲಿ ಹಿಂದೂ ಜಾಗರಣ ಪ್ರಾಂತ್ಯದ ಕಾರ್ಯಕಾರಿ ಸಮಿತಿಯ ಮುಖಂಡ ಟಿ ಕೆ ಉಲ್ಲಾಸ್ ಮಾತನಾಡಿ ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ವಿನಾಕಾರಣ ಹಲ್ಲೆ ಅತ್ಯಾಚಾರಗಳು ಕಿರುಕುಳ ನೀಡುತ್ತಿದ್ದು ಅಲ್ಲಿನ ಸರ್ಕಾರ ಇಂತಹ ಘಟನೆಗಳನ್ನು ಕಂಡು ಕಾಣದಂತೆ ವರ್ತನೆ ಮಾಡುತ್ತಿದ್ದು ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಇದನ್ನು ಹಿಂದೂ ಹಿತರಕ್ಷಣಾ ಸಮಿತಿ ಖಂಡಿಸುತ್ತದೆ ಕೇಂದ್ರ ಸರ್ಕಾರ ಬಾಂಗ್ಲದೇಶದ ಸರ್ಕಾರದ ಮೇಲೆ ಹಿಂದುಗಳ ರಕ್ಷಣೆಗಾಗಿ ಒತ್ತಡ ತರಬೇಕಾಗಿದೆ ಎಂದರು.
ನಂತರ ಮಾತನಾಡಿದ ವನಕಲ್ಲು ಮಹಾಸಂಸ್ಥಾನ ಮಠದ ಬಸವ ದಯಾನಂದ ಮಹಾ ಸ್ವಾಮಿಗಳು ಹಿಂದೂಗಳು ದ್ವನಿ ಎತ್ತಬೇಕು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ರಾಮಕೃಷ್ಣ ಹಾಗು ಜಿಲ್ಲೆ ಹಾಗು ತಾಲ್ಲೂಕಿನ ಹಿಂದೂ ಹಿತರಕ್ಷಣಾ ಸಮಿತಿಯ ಕಾರ್ಯಕರ್ತರು ಹಾಜರಿದ್ದರು.