ಡಿ.09 ರಿಂದ 15 ದಿನಗಳವರೆಗೆ ವಿದ್ಯುತ್ ವ್ಯತ್ಯಯ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೆಪಿಟಿಸಿಎಲ್ ಬೃಹತ್ ಕಾಮಗಾರಿ ವತಿಯಿಂದ 66 ಕೆ.ವಿ ದಾವಣಗೆರೆ-ಚಿತ್ರದುರ್ಗ ಲೈನ್-1ರ ಟ್ಯಾಪ್ ಪಾಯಿಂಟ್‍ನಿಂದ 2.196 ಕಿಮೀ ಉದ್ದಕ್ಕೂ ಭರಮಸಾಗರ ವಿ.ವಿ ಕೇಂದ್ರಕ್ಕೆ 2.196 ಕಿಮೀ ದೂರದ ನಿರ್ಮಾಣಕ್ಕೆ               ಕೊಯೋಟ್ ಕಂಡಕ್ಟರ್‍ನೊಂದಿಗೆ ಜೋಡಿ ಪ್ರಸರಣ ಮಾರ್ಗದ ಮೇಲಿರುವ ಜೋಡಿ ಮಾರ್ಗದಿಂದ ಒಂಟಿ ಪ್ರಸರಣ ಮಾರ್ಗದ ಮೇಲಿರುವ

ಒಂಟಿ ಮಾರ್ಗ ಪರಿವರ್ತಿಸುವ ಮೂಲಕ ಅಸ್ತಿತ್ವದಲ್ಲಿರುವ 66/11 ಕೆವಿ ಭರಮಸಾಗರ ವಿ.ವಿ ಕೇಂದ್ರಕ್ಕೆ ಲೀಲೋ ವ್ಯವಸ್ಥೆ  ಒದಗಿಸಲು 1 ಸಂಖ್ಯೆಯ 66 ಕೆವಿ ಟಿ.ಬಿಯನ್ನು 66/11 ಕೆ.ವಿ ಭರಮಸಾಗರ ವಿ.ವಿ ಕೇಂದ್ರದಲ್ಲಿ ನಿರ್ಮಾಣ ಕಾರ್ಯಕ್ಕಾಗಿ ಇದೇ ಡಿ.09 ರಿಂದ 23 ರವರೆಗೆ (ಪರ್ಯಾಯ ದಿನಗಳಂದು ಡಿ.09, 11, 13, 15, 17, 19, 21 ಮತ್ತು ಡಿ.23ರಂದು) ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ  ಭರಮಸಾಗರ ವಿ.ವಿ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.        

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: ಹೆಗ್ಗೆರೆ, ಎಮ್ಮೆಹಟ್ಟಿ, ನಲ್ಲಿಕಟ್ಟೆ, ಕೋಳಾಳ್ ಎನ್.ಜೆ.ವೈ, ಹೆಗ್ಗಡೆಹಾಳ್,  ವಿಜಾಪುರ, ಶಿವನಕೆರೆ, ನಂದಿಹಳ್ಳಿ,  ಬಹದ್ದೂರ್ ಘಟ್ಟ , ಅಡವಿ ಗೊಲ್ಲರಹಳ್ಳಿ, ಭರಮಸಾಗರ , ಪಮೇರಹಳ್ಳಿ, ಕೋಗುಂಡೆ, ಎಸ್.ಕೆ.ಎಮ್ ಕೈಗಾರಿಕಾ ಪ್ರದೇಶ, ಕೋಡಿಹಳ್ಳಿ, ಅರಳಕಟ್ಟೆ ಮತ್ತು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

- Advertisement -  - Advertisement - 
Share This Article
error: Content is protected !!
";