ಬಳ್ಳಾರಿ ಮಣ್ಣಿನ ಪುಷ್ಪ-2

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪುಷ್ಪ-2 ಫ್ಯಾನ್ ಇಂಡಿಯ ಸಿನಿಮಾ ದೇಶದ ಸಿನಿ ಲೋಕದಲ್ಲಿ ಸಂಚಲನ ಮೂಡಿಸಿದೆ. ಅಲ್ಲು ಅರ್ಜುನ್ ಅಭಿನಯದ ಮ್ಯಾನರಿಸಂ ಯುವಕರನ್ನು ರಂಜಿಸುವಲ್ಲಿ ಯಶಸ್ಸು ಕಂಡಿದ್ದೇ. 2005 ರಿಂದ 2013ರ ವರೆಗೆ ಕರ್ನಾಟಕ ರಾಜ್ಯ ರಾಜಕೀಯ ಸೇರಿದಂತೆ ಬಳ್ಳಾರಿ ಜಿಲ್ಲೆಯ  ಮೈನಿಂಗ್ ಹಿನ್ನೆಲೆ  ಪ್ರತಿಪಾದಿಸುವ  ರೀತಿಯಲ್ಲಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ರಕ್ತಚಂದನ ಮರಗಳ ಕಳ್ಳಸಾಗಣೆ ಹಾಗೂ ರಾಜಕೀಯ ಹಿನ್ನೆಲೆಯಲ್ಲಿ ಕಥೆಯನ್ನು ಹೆಣೆಯಲಾಗಿದೆ.

 ಬಳ್ಳಾರಿ ಮೈನಿಂಗ್ ಹಿನ್ನೆಲೆಯ ಟಿಪ್ಪರ್ ಹಾಗೂ ಕೂಲಿ ಕಾರ್ಮಿಕರ ಬಳಕೆ. ಧಣಿಗಳು ಓಡಾಡುವ ಹೆಲಿಕಾಪ್ಟರ್ ಹಾಗೂ ದೊಡ್ಡ ದೊಡ್ಡ ಕಾರುಗಳು. ಮುಖ್ಯಮಂತ್ರಿಗಳ  ಬದಲಾವಣೆ. ಮುಖ್ಯಮಂತ್ರಿಗಳಿಗೆ ದಣಿಗಳ ಭವ್ಯವಾದ ಮನೆಯಲ್ಲಿ ಅದ್ದೂರಿ=ಔತಣಕೂಟ. ತಿರುಪತಿ ತಿಮ್ಮಪ್ಪನಿಗೆ ಕಿರೀಟ ಅರ್ಪಣೆ. ಇದರೊಂದಿಗೆ ಹಣ ಹಾಗೂ ಅಧಿಕಾರ ದುರುಪಯೋಗದ ಹಿನ್ನೆಲೆಯನ್ನು ಪುಷ್ಪ ಸಿನಿಮಾದಲ್ಲಿ ಮುಖ್ಯಮಂತ್ರಿ ಪ್ರಸ್ತಾವನೆ ಮಾಡುತ್ತಾರೆ.

ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಕಳೆದ 20 ವರ್ಷಗಳಿಂದ ಸತತವಾಗಿ ಇಲ್ಲಿಯವರೆವಿಗೂ ಹಣ ಹಾಗೂ ಅಧಿಕಾರ ದುರುಪಯೋಗದಲ್ಲಿ  ಆಪರೇಷನ್ ರಾಜಕಾರಣ  ಕಂಡುಬರುತ್ತಿದೆ ನೋಡಿದ್ದೇನೆ ಅರಿತಿದ್ದೇನೆ ಇದು ಸಾಮಾಜಿಕ ನ್ಯಾಯಕ್ಕೆ ಆಗುತ್ತಿರುವ ಅನ್ಯಾಯವಾಗಿದೆ. 

ರಾಜಕಾರಣವೇ ಇರಲಿ ಜೀವನವೇ ಇರಲಿ ಮಾಡಿದ ಪಾಪ=ಪುಣ್ಯಗಳು ಬೆನ್ನಹಿಂದೆಯೇ ಇರುತ್ತದೆ ಎಂಬುದಕ್ಕೆ ಸಾಕ್ಷಿ=ಗುಡ್ಡೆಗಳು ಇದ್ದೆ=ಇರುತ್ತದೆ. ನಿನ್ನೆ ಪುಷ್ಪ ಸಿನಿಮಾವನ್ನು ಚಿತ್ರದುರ್ಗದ ಪ್ರಸನ್ನ ಚಿತ್ರಮಂದಿರದಲ್ಲಿ ವೀಕ್ಷಿಸಿದೆ ರಾಜಕೀಯದ ಮೇಲಾಟದಲ್ಲಿ ಈ ಸಿನಿಮಾ ಜನರನ್ನು ಆಕರ್ಷಿಸಿ ಭಾರೀ ಯಶಸ್ಸು ಕಂಡಿದೆ.
ಲೇಖನ-ರಘು ಗೌಡ 9916101265

- Advertisement -  - Advertisement - 
Share This Article
error: Content is protected !!
";