ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಕಾರಣಗಳ ವರದಿ ಸಲ್ಲಿಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಗಳೇನು ಎಂಬುದರ ಬಗ್ಗೆ ಐದು ಜಿಲ್ಲೆಗಳ ಅಧ್ಯಯನ ವರದಿಯನ್ನು ಮಾಜಿ ಸಂಸದರಾದ ವಿ.ಎಸ್ ಉಗ್ರಪ್ಪ ಅವರಿಂದ ಕುಮಾರಪಾರ್ಕ್‌ನ ಗೃಹ ಕಚೇರಿಯಲ್ಲಿ ಸ್ವೀಕರಿಸಿದರು. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಉಂಟಾಗಿತ್ತು. ಹೀಗಾಗಿ ಸೋಲಿನ ಬಗ್ಗೆ ಕಾರಣ ತಿಳಿಯಲು ಕೆಪಿಸಿಸಿ ಸತ್ಯಶೋಧನಾ ಸಮಿತಿ ರಚಿಸಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್‌ಅವರ ಸರ್ಕಾರಿ ನಿವಾಸದಲ್ಲಿ ಉಗ್ರಪ್ಪ ನೇತೃತ್ವದ ಸತ್ಯಶೋಧನಾ ಕಮಿಟಿಯಿಂದ ವರದಿ ಸಲ್ಲಿಸಲಾಗಿದೆ.

ವರದಿ ಸ್ವೀಕಾರ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್​, ಉಗ್ರಪ್ಪ ನೇತೃತ್ವದ ಸತ್ಯಶೋಧನಾ ಕಮಿಟಿ ವರದಿ ಕೊಟ್ಟಿದೆ. 5 ಎಂಪಿ ಕ್ಷೇತ್ರದಲ್ಲಿ ಅಧ್ಯಯನ ಮಾಡಿ ವರದಿ ಸಲ್ಲಿಸಲಾಗಿದೆ. ಸುದರ್ಶನ್, ಉಗ್ರಪ್ಪನವರ ಕಮಿಟಿ ಮಾತ್ರ ವರದಿ ಸಲ್ಲಿಸಿದೆ. ಇನ್ನೂ ಎರಡು ಸಮಿತಿಯ ವರದಿ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಬಾಕಿ ಇರುವ 2 ವರದಿ ಬಂದ ಮೇಲೆ ಎಲ್ಲವನ್ನ ಸೇರಿಸಿ ಮಾತಾಡುತ್ತೇನೆ. ಇದೊಂದೆ ಕಮಿಟಿಯ ವರದಿ ಬಗ್ಗೆ ನಾನು ಮಾತನಾಡಲ್ಲ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ವರದಿ ಕೊಟ್ಟಿದ್ದಾರೆ. ಎಲ್ಲಾ ಕಮಿಟಿ ವರದಿ ಬಂದ ಮೇಲೆ ನಾನು ಮಾತನಾಡುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಡಿಸೆಂಬರ್ 10ರಂದು ಸಿಎಂ ಸಿದ್ದರಾಮಯ್ಯ ಶಾಸಕಾಂಗ ಸಭೆ ಕರೆದಿದ್ದಾರೆ. 26 ಮತ್ತು 27ರ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡುತ್ತೇವೆ. ಗಾಂಧಿ ಭಾರತ ಕಾರ್ಯಕ್ರಮದ ಬಗ್ಗೆ ಅವತ್ತು ಚರ್ಚೆ ಮಾಡುತ್ತಾರೆ. 8ನೇ ತಾರೀಖು ನಾನೇ ಹೋಗಿ ಸ್ಥಳ ಪರೀಶೀಲನೆ ಮಾಡುತ್ತೇನೆ. ಕಲ್ಯಾಣ ಕರ್ನಾಟಕದ ಪದಾಧಿಕಾರಿಗಳ ಸಭೆಯನ್ನ ದಿನಾಂಕ 14 ರಂದು ಬೆಳಗಾವಿಯಲ್ಲಿ ಕರೆದಿದ್ದೇನೆ.

14 ರಂದು ಉಳಿದ ಪದಾಧಿಕಾರಿಗಳ ಸಭೆಯನ್ನ ಭಾರತ್ ಜೋಡೋ ಭವನದಲ್ಲಿ ಕರೆದಿದ್ದೇನೆ. ಎಐಸಿಸಿ ಜನರಲ್ ಸೆಕ್ರೆಟರಿಗಳೆಲ್ಲಾ ಬಂದು ಭೇಟಿ ಮಾಡುತ್ತಾರೆ. ಇದೊಂದು ರಾಷ್ಟ್ರೀಯ ಕಾರ್ಯಕ್ರಮ ಎಂದು ಸಿಎಂ ಶಿವಕುಮಾರ್ ತಿಳಿಸಿದ್ದಾರೆ. ಮಾಜಿ ಸಂಸದರಾದ ವಿ.ಎಸ್ ಉಗ್ರಪ್ಪ ಅವರಿಂದ ಕುಮಾರಪಾರ್ಕ್‌ನ ಗೃಹ ಕಚೇರಿಯಲ್ಲಿ ವರಿಯನ್ನು ಡಿಕೆ ಶಿವಕುಮಾರ್ ಸ್ವೀಕರಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರು, ಮಾಜಿ ಸಚಿವೆ ರಾಣಿ ಸತೀಶ್, ಮಾಜಿ ಮೇಯರ್ ಪಿ.ಆರ್ ರಮೇಶ್, ಕೆಪಿಸಿಸಿ ಉಪಾಧ್ಯಕ್ಷ ಎಂ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

       

- Advertisement -  - Advertisement - 
Share This Article
error: Content is protected !!
";