Ad imageAd image

ಕಾರು ಡಿಕ್ಕಿ ತಾಯಿ ಸಾವು–ಮಗು ಸಾವಿನಿಂದ ಪಾರು

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲ್ಲೂಕಿನ ತೂಬಗೆರೆ ಹೋಬಳಿಯ ತಾಯಿಯೊಬ್ಬರು ತನ್ನ ಮಗುವಿನ ಜೊತೆಯಲ್ಲಿ ಪುಟ್ ಬಾತ್ ನಲ್ಲಿ ನಿಂತು ಆಟೋಗಾಗಿ ಕಾಯುತ್ತಿದ್ದರು.
ಈ ವೇಳೆ ವೇಗವಾಗಿ ಬಂದ ಕಾರು ತಾಯಿ-ಮಗುವಿಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಸ್ಥಳದಲ್ಲೇ ಸಾವು ಕಂಡಿದ್ದು ಮಗು ಪ್ರಾಣಾಪಾಯದಿಂದ ಪಾರು ಘಟನೆ ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ರಸ್ತೆಯ ಹೌಸ್ ಫುಲ್ ಹೋಟೆಲ್ ಬಳಿ  ನಡೆದಿದೆ.

ರಸ್ತೆ ಅಪಘಾತದಲ್ಲಿ 25 ವರ್ಷದ ಭಾನುಪ್ರಿಯಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಕೆಯ 3 ವರ್ಷದ ಮಗ ಸಾತ್ವಿಕ್ ಯಾದವ್ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮರದ ಕೊಂಬೆಯಲ್ಲಿ ಸಿಲುಕಿದ್ದು, ಒಂದು ವೇಳೆ ಮರದಿಂದ ಕೆಳಗೆ ಬಿದ್ದಿದ್ದರೆ ಆತನು ಸಾವನ್ನಪ್ಪುವ ಸಾಧ್ಯತೆ ಇತ್ತು, ಸ್ಥಳೀಯರು ಸುರಕ್ಷಿತವಾಗಿ ಮಗುವಿನ ಪ್ರಾಣ ರಕ್ಷಣೆ ಮಾಡಿದ್ದಾರೆ. 

ಮೃತ ಭಾನುಪ್ರಿಯಾ ತನ್ನ ಹಿರಿಯ ಮಗನ ವ್ಯಾಸಂಗ ಪತ್ರ ತರಲು ಕಿರಿಯ ಮಗನ ಜೊತೆಗೆ ಶಾಲೆಗೆ ಹೋಗಿದ್ದರು. ವ್ಯಾಸಂಗ ಪತ್ರ ಪಡೆದು ಮನೆಗೆ ತೆರಳಲು ಪುಟ್ ಬಾತ್ ನಿಂತು ಆಟೋಗಾಗಿ ಕಾಯುತ್ತಿದ್ದರು. ಈ ವೇಳೆ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ, ಡಿಕ್ಕಿ ಹೊಡೆದ ನಂತರ ಕಾರನ್ನು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ ಪೊಲೀಸರು ಕಾರು ಚಾಲಕನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. 

ಮೃತ ಭಾನುಪ್ರಿಯಾಳ ಗಂಡ ಹರೀಶ್ ಹೂವಿನ ವ್ಯಾಪಾರ ಮಾಡುತ್ತಿದ್ದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಆತ ದೊಡ್ಡಬಳ್ಳಾಪುರದ ಪಾಲಜೋಗಹಳ್ಳಿಯ ಸಿದ್ರಾಮಣ್ಣ ಬಡಾವಣೆಯಲ್ಲಿ ವಾಸವಾಗಿದ್ದರು. ಇಬ್ಬರು ಗಂಡು ಮಕ್ಕಳು ಜೊತೆಯಲ್ಲಿ ಅನಾರೋಗ್ಯದಿಂದ ತಂದೆ ತಾಯಿಯನ್ನು ನೋಡಿಕೊಳ್ಳುತ್ತಿದ್ದರು. ಗಂಡ ಮಾರುಕಟ್ಟೆಯಿಂದ ತರುತ್ತಿದ್ದ ಹೂವನ್ನ ಕಟ್ಟಿ ಸುತ್ತಮುತ್ತಲಿನ ಮನೆಯವರಿಗೆ ಹೂ ಮಾರಿ ಭಾನುಪ್ರಿಯಾ ಕುಟುಂಬಕ್ಕೆ ನೆರವಾಗುತ್ತಿದ್ದರು. ಪಾರ್ಶುವಾಯು ರೋಗಕ್ಕೆ ತುತ್ತಾಗಿದ್ದ ಮಾವನ ಆರೈಕೆ, ಕೈ ಉನಾವಾಗಿದ್ದ ಅತ್ತೆಯ ಆರೈಕೆ ಮಾಡುತ್ತಿದ್ದರು. 

ಅನಿರೀಕ್ಷಿತ ಸಾವು ಇಡೀ ಕುಟುಂಬವನ್ನ ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ. ತನ್ನ ಹೆಂಡತಿ ಮಾಡದ ತಪ್ಪಿಗೆ ಸಾವನ್ನಪ್ಪಿದ್ದಾಳೆ. ಕಾರು ಚಾಲಕನ ಅತಿವೇಗ ಸಾವಿಗೆ ಕಾರಣವಾಗಿದೆ. ಇಬ್ಬರು ಸಣ್ಣ ಮಕ್ಕಳು ಅವರಿಗೆ ತಾಯಿ ಪ್ರೀತಿಯನ್ನ ಕೊಡುವುದು ಹೇಗೆ, ಮನೆಗೆ ಆಕೆ ಬೆನ್ನೆಲುಬಾಗಿ ನಿಂತಿದ್ದಳು. ಅವಳ ಅನಿರೀಕ್ಷಿತ ಸಾವಿನ ನೋವು ಅರಗಿಸಿಕೊಳ್ಳುವದು ಅಸಾಧ್ಯವಾಗಿದೆ. ಅವಳ ಸಾವಿಗೆ ನ್ಯಾಯ ಸಿಗಬೇಕಾದ್ರೆ ಕಾರು ಚಾಲಕನಿಗೆ ಶಿಕ್ಷೆಯಾಗ ಬೇಕೆಂದು ಮನವಿ ಮಾಡಿದರು. 

- Advertisement -  - Advertisement - 
Share This Article
error: Content is protected !!
";