ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ಸರ್ಕಾರ ಬಿಪಿಎಲ್‌ಕಾರ್ಡ್‌ಕೂಡ ನೀಡದೆ, ಕಾರ್ಡ್‌ನಿಂದ ಸಿಗುತ್ತಿದ್ದ ಸೌಲಭ್ಯಗಳೂ ಸಿಗದೆ ನೂರಾರು ಕುಟುಂಬಗಳು ಸಂಕಷ್ಟದಲ್ಲಿ ದಿನದೂಡುತ್ತಿವೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.
ಆದರೆ ಭ್ರಷ್ಟ ಸಿದ್ದರಾಮಯ್ಯ ಸರ್ಕಾರಕ್ಕೆ ಬಡವರ ಗೋಳು ಕೇಳುತ್ತಿಲ್ಲ. ಬೋಗಸ್‌ಗ್ಯಾರಂಟಿಗಳ ಹೆಸರಲ್ಲಿ ಮತ ಪಡೆದು ಅತ್ತ ಪಡಿತರವೂ ನೀಡದೆ, ಇತ್ತ ಬಿಪಿಎಲ್‌ಕಾರ್ಡ್‌ಕೂಡ ನೀಡದೆ ಬಡವರ ಬದುಕನ್ನೇ ಕಿತ್ತುಕೊಂಡಿದೆ ಎಂದು ಬಿಜೆಪಿ ದೂರಿದೆ.